top of page
Writer's pictureBangaloreArchdiocese

ಕಾರ್ಡಿನಲ್ ಟಕ್ರ್ಸನ್ ರವರು “ಲೌದಾತೋ ಸೀ” ಯ ಕಾರ್ಯ ಯೋಜನೆಯನ್ನು ಪ್ರಾರಂಭಿಸಿದರು.


ಸಮಗ್ರ ಮಾನವ ಅಭಿವೃದ್ಧಿಯ ಪ್ರಚಾರಕ್ಕಾಗಿ ಇರುವಂತಹ ವ್ಯಾಟಿಕನ್ ವಿಭಾಗಿಯ ಕಚೇರಿಯ ಮುಖ್ಯಸ್ಥರಾದ ಕಾರ್ಡಿನಲ್ ಪೀಟರ್ ಟಕ್ರ್ಸನ್ ರವರು "ಸಮಗ್ರ ಪರಿಸರ ವಿಜ್ಞಾನದ ಕಡೆಗೆ ಏಳು ವರ್ಷಗಳ ಪಯಣ" - ಲೌದಾತೋ ಸೀ ಯ ಕಾರ್ಯ ಯೋಜನೆಯ ವೇದಿಕೆಯನ್ನು ಪ್ರಾರಂಭಿಸಿದರು.


ವ್ಯಾಟಿಕನ್ ಸುದ್ದಿ ಸಿಬ್ಬಂದಿ ವರದಿಗಾರ


‘ಲೌದಾತೋ ಸೀ’ ಪ್ರಕಟಣೆಯಾದ ಆರು ವರ್ಷಗಳ ನಂತರ ಭೂಮಿಯ ಮತ್ತು ಬಡವರ ಕೂಗು ಹೆಚ್ಚು ಹೆಚ್ಚು ಹೃದಯವಿದ್ರಾವಕವಾಗುತ್ತಿದೆ ಎಂದು ಕಾರ್ಡಿನಲ್ ಪೀಟರ್ ಟಕ್ರ್ಸನ್ ರವರು ಹೇಳುತ್ತಾರೆ. ನಮ್ಮ ವಿಜ್ಞಾನಿಗಳು ಮತ್ತು ನಮ್ಮ ಯುವ ಜನರ ಸಂದೇಶವು ಹೆಚ್ಚು ಆತಂಕಕಾರಿಯಾಗಿದೆ. ನಾವು ನಮ್ಮ ಭವಿಷ್ಯವನ್ನು ನಾಶಪಡಿಸುತ್ತಿದ್ದೇವೆ ಎಂದು ತಿಳಿಸುತ್ತದೆ.


ಈ ಭೀಕರ ಎಚ್ಚರಿಕೆಯೊಂದಿಗಿನ ಆಧಾರದ ಮೇರೆಗೆ ಸಮಗ್ರ ಮಾನವ ಅಭಿವೃದ್ಧಿಯ ಪ್ರಚಾರಕ್ಕಾಗಿ ಇರುವ ವ್ಯಾಟಿಕನ್ ವಿಭಾಗಿಯ ಕಚೇರಿಯ ಮುಖ್ಯಸ್ಥರು ಹೊಸ ವೇದಿಕೆಯೊಂದನ್ನು ಲೌದಾತೋ ಸೀ ಯ ಕಾರ್ಯಯೋಜನೆಗಾಗಿ ಕಲ್ಪಿಸುತ್ತಿದ್ದಾರೆ, ವ್ಯಾಟಿಕನ್ ನಲ್ಲಿ ಇದೊಂದು ಹೊಸ ಹಾಗೂ ದಿಟ್ಟ ಮೊದಲ ಹೆಜ್ಜೆಯಾಗಿದೆ. ಸಮಗ್ರ ಪರಿಸರ ವಿಜ್ಞಾನದ ಕಡೆಗೆ ಏಳು ವರ್ಷಗಳ ಪಯಣ" - ಲೌದಾತೋ ಸೀ ಯ ಕಾರ್ಯ ಯೋಜನೆ ಸಿದ್ಧವಾಗಿದೆ.


ಈಗ ಕಾರ್ಯಪ್ರವೃತ್ತರಾಗಲು ಸೂಕ್ತ ಸಮಯ


ಕಾರ್ಡಿನಲ್ ಪೀಟರ್ ಟಕ್ರ್ಸನ್ ರವರು ಮಂಗಳವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ "ಸಮಗ್ರ ಪರಿಸರ ವಿಜ್ಞಾನದ ಕಡೆಗೆ ಏಳು ವರ್ಷಗಳ ಪಯಣ" - ಲೌದಾತೋ ಸೀ ಯ ಕಾರ್ಯ ಯೋಜನೆಯನ್ನು ಪರಿಚಯಿಸಿದರು. ಈ ಕಾರ್ಯಯೋಜನೆಯನ್ನು ಈ ವರ್ಷದಲ್ಲಿ ನಡೆದ ಅನೇಕ ಸಂದರ್ಭಗಳ ಆಧಾರದ ಮೇರೆಗೆ ಕಾಣಬಹುದಾಗಿದೆ - ಇತ್ತೀಚೆಗೆ ಮುಕ್ತಾಯಗೊಂಡ ಲೌದಾತೋ ಸೀ ಯ ವಾರದ ಆಚರಣೆ, ಸೃಷ್ಟಿಯ ಕಾಲದ ಅಂತ್ಯದ ಸಮಯದಲ್ಲಿ ಹಾಗೂ ಫೆಬ್ರವರಿ ತಿಂಗಳಲ್ಲಿ ನಡೆದ ಫ್ರಾನ್ಸಿಸ್ ರ ಘಟನೆ ಇವೆಲ್ಲವೂ ಈ ಯೋಜನೆಗೆ ಪೂರಕವಾಗಿದೆ.


ವಿಶ್ವದಾದ್ಯಂತ ಒಂದು ವಿಶೇಷ ಲೌದಾತೋ ಸೀ ವರ್ಷದ ಆಚರಣೆ ಹಾಗೂ ಪ್ರಸ್ತಾಪದ ಬಗ್ಗೆ ಜನ ಮುಕ್ತವಾಗಿ ಹಾಗೂ ಉದಾರತೆಯಿಂದ ಸ್ವಾಗತಿಸಿದ್ದಾರೆಂದು ಕಾರ್ಡಿನಲ್ ಪೀಟರ್ ಟಕ್ರ್ಸನ್ ರವರು ಹೇಳಿದರು. "ಸ್ಥಳೀಯ ಧರ್ಮಸಭೆಗಳ ಸಂಘಗಳು, ಚಳುವಳಿಗಳು ಮತ್ತು ಇತರರು ನಮ್ಮ ಸಾಮಾನ್ಯ ಮನೆಯ ಬಗ್ಗೆ ಕಾಳಜಿ ವಹಿಸುವಂತೆ ವಿಶ್ವಗುರು ಫ್ರಾನ್ಸಿಸ್ ಅವರು ಮಾಡಿದ ಮನವಿಗೆ ಬಹಳ ಉತ್ಸಾಹದಿಂದ ಪ್ರತಿಕ್ರಿಯಿಸಿದ್ದಾರೆ. ಅದಾಗಿಯೂ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಏನಾದರೂ ವಾಸ್ತವವಾಗಿ ಏನಾದರೂ ಕೆಲಸ ಮಾಡಲು ಸಮಯವಾಗಿದೆ ಎಂದು ಅವರು ಹೇಳಿದರು.


ಲೌದಾತೋ ಸೀ ಯ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳುವುದು.


ಪತ್ರಿಕಾಗೋಷ್ಠಿಯಲ್ಲಿ ಸಮಗ್ರ ಮಾನವ ಅಭಿವೃದ್ಧಿಯ ಪ್ರಚಾರಕ್ಕಾಗಿ ಇರುವ ವ್ಯಾಟಿಕನ್ ವಿಭಾಗಿಯ ಕಚೇರಿಯ ಸದಸ್ಯರಾದ ವಂ. ಸ್ವಾಮಿ ಜೋಶ್ ಕುರೀದದಮ್ ರವರು ಕಾರ್ಯಯೋಜನೆಯೆಂದರೆ ಏನು? ಮತ್ತು ಹೇಗೆ ಅದು ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.


ಐSಂP - ಲೌದಾತೋ ಸೀ ಯ ಅವಿಭಾಜ್ಯ ಪರಿಸರ ದೃಷ್ಟಿಯನ್ನು ಸಾಕಾರಗೊಳಿಸುವ ಒಂದು ಪ್ರಯಾಣವಾಗಿದೆ ಎಂದು ಗುರುಗಳು ಹೇಳಿದರು. ಕೊನೆಗೆ ಇದೊಂದು ಅವಿಭಾಜ್ಯ ಪರಿಸರ ವಿಜ್ಞಾನದ ಉತ್ಸಾಹದಲ್ಲಿ ಒಟ್ಟು ಸುಸ್ಥಿರತೆಯ ಸಾಗುವ ಪ್ರಯಾಣವಾಗಿದೆ ಎಂದು ತಿಳಿಸಿದರು.


ವ್ಯಾಟಿಕನ್ ವಿಭಾಗಿಯ ಕಚೇರಿಯೂ ಈ ಕಾರ್ಯಯೋಜನೆಯ ಏಳು ಗುರಿಗಳನ್ನು ಪ್ರಸ್ತಾಪಿಸಿತು. 1) ಭೂಮಿಯ ಕೂಗಿಗೆ ಪ್ರತಿಕ್ರಿಯೆ 2) ಬಡವರ ಕೂಗಿಗೆ ಪ್ರತಿಕ್ರಿಯೆ 3) ಪರಿಸರ ಅರ್ಥಶಾಸ್ತ್ರ 4) ಸರಳ ಜೀವನ ಶೈಲಿ ಅಳವಡಿಕೆ 5) ಪರಿಸರ ಶಿಕ್ಷಣ 6) ಪರಿಸರ ಅಧ್ಯಾತ್ಮಿಕತೆ 7) ಸಮುದಾಯ ಒಳಗೊಳ್ಳುವಿಕೆ ಮತ್ತು ಭಾಗವಹಿಸುವ ಕ್ರಿಯೆ.


ಪ್ರಾರ್ಥನೆ ಮತ್ತು ಕನಸು


ಈ ಎಲ್ಲಾ ಗುರಿಗಳನ್ನು ಪಾಲುದಾರಿಕೆಯ ಮೂಲಕವೇ ವಿಶ್ವಗುರು ಫ್ರಾನ್ಸಿಸ್ ರವರು ಪ್ರಸ್ಥಾಪಿಸಿರುವ ಸಿನೋಡಲ್ ಹಾದಿಯಲ್ಲಿ ನಡೆಯುವುದನ್ನು ಸಾಧಿಸಬಹುದು ಎಂದು ಅವರು ತಿಳಿಸಿದರು. ಕಾರ್ಯಗತಗೊಳಿಸಲು ರಚಿಸಲಾದ ಕಾರ್ಯನಿರತ ವಿವಿಧ ಗುಂಪುಗಳು ಮುಂದಿನ ಭವಿಷ್ಯವನ್ನು ಒಟ್ಟಿಗೆ ರೂಪಿಸಲು ಈ ಪ್ರಸ್ತುತ ಸಾಂಕ್ರಾಮಿಕ ಸಂದರ್ಭದಲ್ಲಿ ನಿರಂತರವಾಗಿ ಪ್ರತಿಕ್ರಿಯಿಸಲು ವಿಶ್ವದಾದ್ಯಂತ ಪಾಲುದಾರರನ್ನು ಒಟ್ಟುಗೂಡಿಸುತ್ತದೆ. ಕೆಳಹಂತದಲ್ಲಿ ಜನರ ಆಂದೋಲನವನ್ನು ಪ್ರಾರಂಭಿಸುವ ಸಲುವಾಗಿ ಐSಂP ಯ ಪ್ರಾರ್ಥನೆ ಮತ್ತು ಕನಸು ಅಗತ್ಯವಿದೆ. ಇದರಿಂದ ನಮ್ಮ ಸಾಮಾನ್ಯ ಮನೆಯ ಬಿಕ್ಕಟ್ಟಿನ ತುರ್ತುಸ್ಥಿತಿಯ ಅಗತ್ಯವಾಗಿ ಬದಲಾವಣೆಯನ್ನು ನಿಜವಾಗಿಯೂ ತರಬಹುದಾಗಿದೆ ಎಂದು ವಂದನೀಯ ಸ್ವಾಮಿ ಜೋಶ್ ರವರು ತಿಳಿಸಿದರು.


25 ಮೇ 2021, 13:10

32 views0 comments

Comments


bottom of page