top of page

ಕೊಲಂಬಿಯನ್ನರ ಪ್ರತಿಭಟನೆಯಲ್ಲಿ ನಾವು - ಆರ್'ಇಪಿಎಎಮ್

Writer's picture: BangaloreArchdioceseBangaloreArchdiocese

Updated: Jun 11, 2021


ವ್ಯಾಟಿಕನ್ ವಾರ್ತೆ ಸಿಬ್ಬಂಧಿಯಿಂದ


ಕೊಲಂಬಿಯ ಸರ್ಕಾರವು ತೆರಿಗೆ ಕಾಯ್ದೆ ನಿಯಮಗಳನ್ನು ಹಿಂಪಡೆದಿದೆ. ಇದನ್ನು ಖಂಡಿಸಿ ಅಲ್ಲಿನ ನಾಗರಿಕರು ಪ್ರತಿಭಟಿಸುತ್ತಿದ್ದಾರೆ, ಏಕೆಂದರೆ ಈ ತೆರಿಗೆ ಕಾಯ್ದೆಯನ್ನು ಹಿಂಪಡೆದಿರುವುದರಿಂದ ಮಧ್ಯಮವರ್ಗದವರು ಹಾಗೂ ಕಾರ್ಮಿಕ ಕೆಲಸಗಾರರಿಗೆ ತೊಂದರೆಯಾಗುವುದೆಂದು ಕೊಲಂಬಿಯನ್ನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ಯಾನ್ - ಅಮೆಜಾನಿಯನ್ ಎಕ್ಲೆಸಿಯಲ್ ನೆಟ್ವರ್ಕ (ಖಇPಂಒ) ರವರು, ಇವರೊಂದಿಗೆ ನಾವು ಸಹ ಈ ಪ್ರತಿಭಟನೆಯಲ್ಲಿ ಇದ್ದೇವೆಂದು ಹೇಳಿದ್ದಾರೆ


ಈ ತೆರಿಗೆ ಪ್ರತಿಭಟನೆಯೂ ಏಪ್ರಿಲ್ ತಿಂಗಳಲ್ಲಿ ಶುರುವಾಯಿತು ಕ್ರಮೇಣ ಶೈಕ್ಷಣಿಕ, ಆರೋಗ್ಯ ಹಾಗೂ ಇತರೆ ಕ್ಷೇತ್ರಗಳು ವಿಕಾಸನ ಕೊಳ್ಳಬೇಕೆಂದು ಪ್ರತಿಭಟನೆಗಳು ಪ್ರಾರಂಭವಾಯಿತು. ಇದುವರೆಗೆ ಭದ್ರತಾ ಸಿಬ್ಬಂದಿಗಳು ನಾಗರಿಕರ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಜನರು ಮೃತ ಪಟ್ಟಿದ್ದಾರೆ. ಜಗದಾದ್ಯಂತ ಅದಕ್ಕೆ ವ್ಯಾಪಕ ಖಂಡನೆ ಆಗಿದೆ ಹಾಗೂ ಈ ಹಿಂಸಾಚಾರವನ್ನು ನಿಲ್ಲಿಸಲು ಕೇಳಿಕೊಂಡಿದ್ದಾರೆ.


ಕಾರ್ಡಿನಲ್ ಪೆಡ್ರೊ ಬ್ಯಾರೆಟೊ ಮತ್ತು ಬಿಷಪ್ ರಾಫೆಲ್ ಕಾಬ್ ಗಾರ್ಸಿಯಾ, ಖಇPಒ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸಹಿಹಾಕಿರುವ ಪತ್ರದಲ್ಲಿ "ಜನರ ಬೇಡಿಕೆಗಳನ್ನು ಈಡೇರಿಸದೆ ಇರುವುದು ಹಾಗೂ ತಾವು ಕೊಟ್ಟಮಾತಿನಂತೆ ನಡೆದುಕೊಳ್ಳದಿರುವುದು ಕೊಲಂಬಿಯನ್ನರಲ್ಲಿ ಅಸಮಾಧಾನ ಮೂಡಿಸಿದೆ, ಇದರಿಂದಾಗಿ ಈ ಗೊಂದಲದ ವಾತಾವರಣ ನಿರ್ಮಾಣವಾಗಿದೆ" ಎಂದು ಹೇಳಲಾಗಿದೆ.


ಪ್ರಜಾಪ್ರಭುತ್ವದೊಳಗೆ ಸಂವಾದದ ಅವಶ್ಯಕತೆ


ಇತರ ದೇಶಗಳಂತೆ ಕೊಲಂಬಿಯಾದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಹಾಗು ಮುಳುಗುವ ಹಂತದಲ್ಲಿದೆಯೆಂದು ಖಇPಂಒ ಹೇಳಿದೆ. ಸರಕಾರದ ಪ್ರತ್ಯುತ್ತರ, ಪೆÇಲೀಸರ ಆರ್ಭಟ, ಇSಒಂಆ (ಒobiಟe ಂಟಿಣi ಆisಣuಡಿbಚಿಛಿe Squಜಡಿoಟಿ), ಮಿಲಿಟರಿ ಹಾಗೂ ಭದ್ರತಾ ಸಿಬ್ಬಂದಿಗಳ ನಡತೆ ಕೆಲವು ಪ್ರತಿಭಟನಾಕಾರರನ್ನು ಸಾಯಿಸಿದೆ, ಕೆಲವರನ್ನು ಕಾಣೆಯಾಗಿಸಿದೆ ಹಾಗೂ ಕೆಲವರನ್ನು ಜೈಲಿಗೆ ಕಳುಹಿಸಿದೆ ಎಂಬ ಕಳವಳವನ್ನು ಖಇPಂಒ ವ್ಯಕ್ತಪಡಿಸಿದೆ.


ಪ್ರಜಾಪ್ರಭುತ್ವವು ಸಂಭಾಷಣೆಯ ಆಧಾರದ ಮೇಲೆ ನಿರ್ಮಾಣವಾಗಿದೆ ಮತ್ತು ಆ ಸಂಭಾಷಣೆಯು ಕಾರ್ಯನಿರ್ವಹಿಸದಿರುವಾಗ ಅದು ದುರ್ಬಲಗೊಳ್ಳುತ್ತದೆ. ಖಇPಂಒ ಮತ್ತೆ ಹೇಳುತ್ತಾ, ಸಾಮಾಜಿಕ ಪ್ರದರ್ಶನಗಳು, ಸಾಮಾಜಿಕ ಪ್ರತಿಭಟನೆಗಳು, ನ್ಯಾಯ ಹಾಗೂ ಸಂವಿಧಾನ ಬದ್ಧವಾಗಿದ್ದು, ಅನ್ಯಾಯದ ವಿರುದ್ಧ ಧ್ವನಿ ಎತ್ತ ಬಹುದಾಗಿದೆ. ಇವರನ್ನು ಕಾಪಾಡುವುದು ದೇಶದ ಹಿತರಕ್ಷಣೆಯಾಗಿದೆ.


ನಾಗರೀಕ ಹಕ್ಕುಗಳಿಗೆ ಗೌರವ


ಕೆಲವು ಜನರು ಈ ಪ್ರತಿಭಟನೆಗೆ ಹಿಂಸಾಚಾರದ ರೂಪ ಕೊಟ್ಟು ಹಾಗೂ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಜನರಿಗೆ ಗೌರವ ಕೊಡದೆ ಹೋದರು. ಜನರು ವ್ಯಕ್ತ ಪಡಿಸುತ್ತಿರುವ ತಮ್ಮ ಹಕ್ಕು ಹಾಗೂ ಭಾವನೆಗಳನ್ನು ಗೌರವಿಸಿ ಹಾಗೂ ಅದರ ಪರವಾಗಿ ನಿಲ್ಲಬೇಕು ಎಂದು ಖಇPಂಒ ಕರೆ ಕೊಟ್ಟರು


ಪ್ರಸ್ತುತ ಜನರ ಆಕ್ರೋಶವು ದೇಶವನ್ನು ಹಿಂಸಾಚಾರದ ವಿಕೋಪಕ್ಕೆ ತಿರುಗಿಸದಿರಲಿ ಎಂದು ಖಇPಂಒ ಹೇಳಿದೆ ಹಾಗೂ ಪ್ರಾಮಾಣಿಕ, ಮುಕ್ತ, ಶಾಶ್ವತ ಸಂವಾದಕ್ಕಾಗಿ ನಾವು ಶರತ್ತುಗಳನ್ನು ಬಯಸುತ್ತೇವೆ ಇದನ್ನು ಸಾಧಿಸಲು ಶಾಂತಿಯುತ ಅಡಿಪಾಯದ ಮೂಲಕ ಪ್ರಜಾಪ್ರಭುತ್ವವನ್ನು ಪುನಹ ಕಟ್ಟಬೇಕಾಗಿದೆ ಎಂದಿದೆ.


ಕೊನೆಯಲ್ಲಿ, ಖಇPಂಒ ಮತ್ತೆ, ಶಾಂತಿ ಮತ್ತು ನ್ಯಾಯದ ಹುಡುಕಾಟದಲ್ಲಿರುವ ಕೊಲಂಬಿಯನ್ನರೋಂದಿಗೆ ನಾವು ನಿಂತಿದ್ದೇವೆ ಹಾಗೂ ನಾವೆಲ್ಲರೂ ಸೌಹಾರ್ದತೆಯ ಬುನಾದಿಯನ್ನು ಕಟ್ಟೋಣ ಎಂದು ಹೇಳಿದ್ದಾರೆ.


08 ಜೂನ್ 2021, 13:49


ಕನ್ನಡಕ್ಕೆ: ಅನಿಲ್

51 views0 comments

Comments


ADDRESS

Archbishop’s House

75 Millers Road,

Bengaluru – 560 046

Karnataka

India

JOIN THE ARCHDIOCESAN 
MAILING LIST
  • Grey Facebook Icon
  • Grey Instagram Icon

QUICK LINKS : CCBI | VATICAN

© 2024 ALL RIGHTS RESERVED ARCHDIOCESE OF BANGALORE (ARCHDIOCESAN COMMUNICATION CENTER) | DESIGNED BY WISE MEDIA 

bottom of page