![](https://static.wixstatic.com/media/82588d_5ae520fcaa814d41abf463a102418dad~mv2.jpeg/v1/fill/w_750,h_422,al_c,q_80,enc_auto/82588d_5ae520fcaa814d41abf463a102418dad~mv2.jpeg)
ಫೆಬ್ರವರಿಯ ನಂತರ ಮೊದಲ ಬಾರಿಗೆ ಯು.ಕೆ 10000 ದೈನಂದಿನ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಸ್ತುತ ಸೋಂಕಿನ ಹೆಚ್ಚಳವು ಭಾರತದಲ್ಲಿ ಮೊಟ್ಟಮೊದಲು ಕಂಡುಬಂದಿದ್ದರಿಂದ ಭಾರತ ದೇಶವನ್ನು ಆರೋಪಿಸಲಾಗಿದೆ.
ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ಬರಹಗಾರರಿಂದ.
ಸರಿಸುಮಾರು ನಾಲ್ಕು ತಿಂಗಳಲ್ಲಿ ಮೊದಲ ಬಾರಿಗೆ ದೈನಂದಿನ ಸೋಂಕಿನ ಪ್ರಮಾಣ 10, 000 ಹೆಚ್ಚಾಗಿದೆ ಎಂದು ಗುರುವಾರ ಸರ್ಕಾರ ವರದಿ ನೀಡಿದೆ.
ಈ ಸೋಂಕಿನಿಂದ ಪರೀಕ್ಷೆಗೆ ಒಳಗಾಗಿ ಪಾಸಿಟಿವ್ ಎಂದು ಕಂಡು ಬಂದವರಲ್ಲಿ 19 ಜನರು ಸಾವನ್ನಪ್ಪಿದ್ದಾರೆ. ಈ ಪ್ರಸ್ತುತತೆಯನ್ನು ಸಾವಿನ ಅಂಕಿಅಂಶಗಳು ತೋರಿಸಿಕೊಟ್ಟಿವೆ. ಇದು ಮೇ ಹನ್ನೊಂದರ ನಂತರದ ದೈನಂದಿನ ಸೋಂಕಿನ ಸಾವಿನ ಸಂಖ್ಯೆ.
ಯೂರೋಪಿನಲ್ಲಿರುವ ಯು.ಕೆಯಲ್ಲಿ ಸುಮಾರು 128, 000 ಹೆಚ್ಚು ಸಾವುಗಳನ್ನು ಕಂಡಿದೆ.
ಡೆಲ್ಟ ಬಿನ್ನತೆ
ಪ್ರಸ್ತುತ ಪ್ರಕರಣಗಳ ಹೆಚ್ಚಳವನ್ನು ಡೆಟ್ಟಾ ಭಿನ್ನತೆಯಿಂದ ಆಗಿದೆ ಎಂದು ಆರೋಪಿಸಲಾಗಿದೆ. ಈ ಸೋಂಕಿನ ಹೆಚ್ಚಳವನ್ನು ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟಿದೆ ಹಾಗೂ ಈ ಸೋಂಕಿನ ಹೊಸ ಪ್ರಕರಣಗಳಲ್ಲಿ ಗರಿಷ್ಠ 95 % ಯು.ಕೆ ಪ್ರದೇಶದಲ್ಲಿ ಕಂಡುಬಂದಿದೆ.
ಸರ್ಕಾರದ ಮುಖ್ಯ ವೈದ್ಯ ಸಲಹೆಗಾರ ಪ್ರೊಫೆಸರ್ ಕ್ರಿಸ್ ವಿಟಿ ಅವರು, “ ಪ್ರಸ್ತುತ ಕೊರೋನಾ ಸೋಂಕಿನ ವೈರಾಣು ಮತ್ತಷ್ಟು ಉಲ್ಬಣವಾಗಿ ಅದರ ಎತ್ತರವು ಇನ್ನೂ ಅನಿಶ್ಚಿತವಾಗಿ ಉಳಿದಿದೆ” ಎಂದು ಹೇಳಿದ್ದಾರೆ.
ಈ ಚಳಿಗಾಲದ ವೈರಾಣು ಉಲ್ಬಣಕ್ಕೆ ದೇಶವು ಪಟ್ಟಿ ಹಾಕಿಕೊಳ್ಳಬೇಕು ಎಂದು ಹೇಳಿದ್ದಾರೆ.
ಲಸಿಕೆ ಅಭಿಯಾನ.
ಸಿಕೆ ಅಭಿಯಾನಕ್ಕಾಗಿ ಯು.ಕೆ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟತು, ಇಂದು ಬ್ರಿಟಿಷ್ ಜನಸಂಖ್ಯೆ ಸುಮಾರು 63ರಷ್ಟು ಕನಿಷ್ಠ ಒಂದು ಡೊಸ್ ಲಸಿಕೆ ಪಡೆದಿದೆ. ಆದರೆ 46ರಷ್ಟು ಜನಸಂಖ್ಯೆ ಮಾತ್ರ 20 ಸಿಕ್ಕೆ ಸ್ವೀಕರಿಸಿದೆ.
ಹೊಸದಾಗಿ ಖಚಿತಪಡಿಸಲು ಪಟ್ಟಿರುವ ಹೆಚ್ಚಿನ ಪ್ರಕರಣಗಳು ಇನ್ನು ಚುಚ್ಚುಮದ್ದು ಪಡೆಯಬೇಕಾದ ಕಿರಿಯ ವಯಸ್ಸಿನ ಗುಂಪಿನವ ರಗಿದ್ದಾರೆ. ಶುಕ್ರವಾರದೊಳಗೆ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಚುಚ್ಚುಮದ್ದಿನ ಪ್ರಕ್ರಿಯೆ ನೀಡಲಾಗುವುದು.
ಈ ನವ ಭಿನ್ನತೆಗಳು ಅದರ ಹರಡುವ ವೇಗವು, ಪುನಹ ತೆರೆಕಾಣುವುದು ತಡವಾಗುವುದು ಖಚಿತ. ಪ್ರಧಾನಮಂತ್ರಿ ಬೋರಿಸ್ ಜಾನ್ಸನ್ ರವರು ಜುಲೈ 19 ರ ವರೆಗೆ ಉಳಿದಿರುವ ಎಲ್ಲಾ ನಿರ್ಬಂಧನೆಗಳನ್ನು ವಿಮುಕ್ತಗೊಳಿಸುವುದು ವಿಳಂಬಕ್ಕೆ ಕಾರಣವಾಗಿದೆ.
ಶ್ರೀ ಜಾನ್ಸನ್ ರವರು ಹೇಳಿದಂತೆ, “ಸರ್ಕಾರವು ಮೊದಲು ಆಯೋಜಿಸಿದಂತೆ ಜೂನ್ 21ರಂದು ನಿರ್ಬಂಧಗಳನ್ನು ತೆಗೆದು ಹಾಕಿದರೆ, ಹೆಚ್ಚು ಸಾಂಕ್ರಮಿಕ ಭಿನ್ನತೆಗಳು ಕಂಡು ಬಂದು ತ್ವರಿತ ಹರಡುವಿಕೆ ಹೆಚ್ಚಾಗಿ ಇನ್ನೂ ಸಾವಿರಾರು ಸಾವುಗಳು ಸಂಭವಿಸಬಹುದು ಎಂದು ಹೇಳಿದರು.
ಸೋಂಕಿನ ಹೆಚ್ಚಳವನ್ನು ಕಂಡು ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗಿವೆ. ಭಾರತದಿಂದ ಆಗಮಿಸುವ ಪ್ರತಿಯೊಬ್ಬರ ಮೇಲೆ ಕಟ್ಟುನಿಟ್ಟಾದ ಸಂಪರ್ಕ ತಡೆಯನ್ನು ವಿಧಿಸಲು ತೀವ್ರ ನಿಧಾನವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹಲವರು ಹೇಳಿದ್ದಾರೆ.
ಲಸಿಕೆ ಬಳಕೆಯನ್ನು ಮುಂದುವರೆಸುವ ಮೂಲಕ ಯು.ಕೆ, ಸೋಂಕಿನ ಹೆಚ್ಚಳವನ್ನು ಹಾಗೂ ಏರಿಳಿತವನ್ನು ತಡೆಗಟ್ಟಿದರೆ, ಮುಂಬರುವ ಲಾಕ್ಡೌನ್ ಸರಾಗಗೊಳ್ಳುವುದು.
18 ಜೂನ್ 2021, 18:55
ಕನ್ನಡಕ್ಕೆ: ಸಹೋ. ಅಂತೋಣಿ ನವೀನ್
Comments