ಭಾರತದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು ಕೋವಿಡ್ ಪೀಡಿತರ ಸಹಾಯಕ್ಕಾಗಿ ದೇಣಿಗೆಗಾಗಿ ಮನವಿಯ ಮಾಡಲು ಪ್ರಾರಂಭಿಸಿತು.
ವ್ಯಾಟಿಕನ್ ನ್ಯೂಸ್ ಸಿಬ್ಬಂದಿ ವರದಿಗಾರ
ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು ಲಗಾಮಿಲ್ಲದೆ ಸಾಗುತ್ತಿದೆ. ಇದುವರೆಗೆ 29 ದಶಲಕ್ಷ ಸೋಂಕುಗಳು ವರದಿಯಾಗಿವೆ. ಭಾರತವು ಗುರುವಾರ ಒಂದು ದಿನದ ಅತಿ ಹೆಚ್ಚು ಸಾವಿನ ಸಂಖ್ಯೆಯನ್ನು ದಾಖಲಿಸಿ ಸುಮಾರು 360 ಸಾವಿರ ಸಾವುಗಳ ಭಯಾನಕ ಸಂಖ್ಯೆಯನ್ನು ಮುಟ್ಟಿದೆ.
ವೀಡಿಯೊ ಸಾಕ್ಷ್ಯ
ಇದರಿಂದಾಗಿ ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು (ಸಿಐ) ತಮಿಳುನಾಡು ರಾಜ್ಯದ ದಿಂಡಿಗಲ್‌ನ ಧರ್ಮಕ್ಷೇತ್ರದ ಧರ್ಮಕ್ಷೇತ್ರದ ಕಾರಿತಾಸ್ ಸಿಬ್ಬಂದಿ ಜಾಕೋಬ್ ರವರ ಮನಮುಟ್ಟುವ ವಿಡಿಯೋ ಸಾಕ್ಷ್ಯವನ್ನು ಬಿಡುಗಡೆ ಮಾಡಿತು.
ಈ ಸಣ್ಣ ವೀಡಿಯೊದಲ್ಲಿ, ಅವರು ಸ್ಥಳೀಯ ಜನರು ಎದುರಿಸುತ್ತಿರುವ ವಿಷಮ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಹಿನ್ನೆಲೆಯಲ್ಲಿ ರೋಗದಿಂದ ಬಳಲುವ ಜನರು ಕಷ್ಟಕರ ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳು ಕಾಣುತ್ತವೆ.
ಇಂತಹ ಪರಿಸ್ಥಿತಿಯಲ್ಲೂ ದೃಢವಾದ ಭರವಸೆಯ ಕಿರಣಗಳು ಹೊರಹೊಮ್ಮುತ್ತಾ ಸ್ಥಳೀಯ ಜನರ ನೆರವಿಗೆ ನಿಂತ ಕಾರಿತಾಸ್ ನ ಬದ್ಧತೆಯನ್ನು ಈ ವಿಡಿಯೋ ಒತ್ತಿ ಹೇಳುತ್ತದೆ.
ಕ್ಯಾರಿಟಾಸ್ ಸಂಸ್ಥೆಯ ಬದ್ಧತೆ
"ಎಲ್ಲವನ್ನೂ ಯಾವುದೇ ಹಿಂಜರಿಕೆಯಿಲ್ಲದೆ ನೀಡುವುದೇ, ಕ್ಯಾರಿಟಾಸ್ ನ ಕೆಲಸ "ಎಂದು ಕಾರಿತಾಸ್ ಇಂಟರ್‌ನ್ಯಾಷನಲಿಸ್‌ನ ಪ್ರಧಾನ ಕಾರ್ಯದರ್ಶಿ ಅಲೋಶಿಯಸ್ ಜಾನ್ ತಮ್ಮ ಹೇಳಿಕೆಯಲ್ಲಿ ವಿವರಿಸುತ್ತಾರೆ .
"ಪರಿಸ್ಥಿತಿ ಪ್ರತಿದಿನ ಹೆಚ್ಚು ಕಠಿಣವಾಗುತ್ತಾ ಯಾವುದೇ ಭರವಸೆ ಇಲ್ಲದಾಗಲೂ ಜಾಕೋಬ್ ಮತ್ತು ಭಾರತದ ಕ್ಯಾರಿಟಾಸ್ ಶಾಖೆಯ ಇತರ ಎಲ್ಲಾ ಸಿಬ್ಬಂದಿ ಮತ್ತು ಸ್ವಯಂಸೇವಕರು ಪ್ರತಿದಿನವೂ ಇದನ್ನೇ ಮಾಡುತ್ತಿದ್ದಾರೆ. ಆಹಾರ, ಮುಖಗವಚ, ಸೋಂಕುನಿವಾರಕಗಳನ್ನು ವಿತರಿಸುತ್ತಾ ವೈದ್ಯರಿಗಳಿಗೆ ತಮ್ಮ ಜೀವದ ಅಪಾಯದ ನಡುವೆಯೂ ಸಹಾಯ ಮಾಡುತ್ತಿದ್ದಾರೆ.
ಪ್ರಧಾನ ಕಾರ್ಯದರ್ಶಿ ತಮ್ಮ ಸಂಸ್ಥೆಯು ಭಾರತದಲ್ಲಿ ಸಾಂಕ್ರಾಮಿಕ ರೋಗಕ್ಕೆ "ತಕ್ಷಣದ ಮಾನವೀಯ ಪ್ರತಿಕ್ರಿಯೆಯನ್ನು" ನೀಡಿದನ್ನು ನೆನಪಿಸುತ್ತಾ "ಸಾವಿರಾರು ಫಲಾನುಭವಿಗಳ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು. ಅಲ್ಲಿ 28 ಪ್ರಥಮ ಹಂತದ ಚಿಕಿತ್ಸಾ ಕೇಂದ್ರಗಳನ್ನು ಮತ್ತು 58 ಎರಡನೇ ಹಂತದ ಸ್ಥಾಪಿಸಲು ಸಾಧ್ಯವಾಗಿದೆ. ಈ ಮೂಲಕ 2,384 ರೋಗಿಗಳಿಗೆ ಕ್ಯಾರಿಟಾಸ್ ವೈದ್ಯಕೀಯ ಸಹಾಯಕರು ಸಹಾಯ ಮಾಡಿದ್ದಾರೆ " ಎಂದರು.
ಸ್ವಯಂಸೇವಕರು
ಇದರ ಜೊತೆಗೆ, "ಕೋವಿಡ್ ಸಮಾರಿತರು" ಎಂದು ಕರೆಯಲ್ಪಡುವ ಸ್ವಯಂಸೇವಕರಿದ್ದಾರೆ. ಅವರು " ಒಂಟಿಯಾಗಿರುವ ಜನರಿಗೆ ಸಾಂತ್ವನ ನೀಡುತ್ತಾ, ಅವಶ್ಯವಿರುವವರಿಗೆ ವೈದ್ಯಕೀಯ ಆರೈಕೆ, ಆಮ್ಲಜನಕದ ನೆರವು, ಚೇತರಿಕೆ ಸಹಾಯವನ್ನು ನೀಡುತ್ತಿದ್ದಾರೆ".
"ಇದಲ್ಲದೆ, 35 ಸಾವಿರಕ್ಕೂ ಹೆಚ್ಚು ಮುಖಗವಚ, 35 ಸಾವಿರ ಆಹಾರ ಕಿಟ್‌ಗಳು ಮತ್ತು 22 ಸಾವಿರ ವೈದ್ಯಕೀಯ ಕಿಟ್‌ಗಳ ವಿತರಣೆ ಆಗಿದೆ".
"ಕಾರಿತಾಸ್ ಇಂಟರ್‌ನ್ಯಾಷನಲಿಸ್ ಸಂಸ್ಥೆಯು ತನ್ನ ಭರವಸೆಯನ್ನು ಹೆಚ್ಚು ನೊಂದಿತ ಮತ್ತು ಅಗತ್ಯವಿರುವ ಎಲ್ಲ ಜನರೊಂದಿಗೆ ನಿಲ್ಲಲು ಬಯಸಿದೆ" ಎಂದು ಪ್ರಧಾನ ಕಾರ್ಯದರ್ಶಿಗಳು ತಿಳಿಸಿದರು. ಅಂತೆಯೇ ದೇಣಿಗೆಗಾಗಿ ಮನವಿ ಮಾಡುತ್ತಾ, "ಕೋವಿಡ್ ಹಾಗೂ ಅದರ ಸಾಮಾಜಿಕ ಪರಿಣಾಮಗಳ ವಿರುದ್ಧ ಹೋರಾಡುವವರಿಗೆ ಇದು ಭರವಸೆ ನೀಡುತ್ತದೆ." ಎಂದು ತಮ್ಮ ಮಾತುಗಳನ್ನು ಮುಗಿಸಿದರು.
11 ಜೂನ್ 2021, 11:13
ಕನ್ನಡಕ್ಕೆ: ಪ್ರಶಾಂತ್ ಇಗ್ನೇಷಿಯಸ್
Comments