ಅಬ್ಬೆ ಆಫ್ ಪ್ರಿಮಾ0ಟ್ರೆ, ಫ್ರಾನ್ಸ್ನ ಸಂಸ್ಥಾಪನೆಯ 900 ವμರ್Áಚರಣೆ ಜ್ಯೂಬಿಲಿ ಘೋಷಣೆ ಸಂದರ್ಭದಲ್ಲಿ, ವಿಶ್ವಗುರು ಫ್ರಾನ್ಸಿಸ್ ರವರು, ಸಂತ ನಾರ್ಬರ್ಟ್ ರವರ ಸ್ಮರಣಾರ್ಥ ಅಬ್ಬೆuಟಿಜeಜಿiಟಿeಜೕಟ್ ವೌಟರ್ಸ್ ರವರಿಗೆ ಪತ್ರದ ಮುಖೇನ 'ಈ ಸಭೆಯು ವಿಶ್ವದ ಏಳು ಖಂಡಗಳಲ್ಲಿಯೂ ವ್ಯಾಪಿಸಿ, ಬೈಬಲ್ ಶ್ರೀಗ್ರಂಥದ ಮುನ್ನಡೆಯಲ್ಲಿ ದೈವವಾಣಿಯನ್ನೂ ಮತ್ತು ಅವರ ಸಹೋದರ ಸಹೋದರಿಯರನ್ನೂ ಆಲಿಸುವಂತಾಗಲಿ'. ಎ0ದು ಸಭೆಯವರಿಗೆ ಕರೆ ನೀಡಿದ್ದಾರೆ.
ವರದಿ: ಬೆರ್ನಾದೆತ್ ಕಾಪಲ್ಲಿ
ವಿಶ್ವಗುರು ಫ್ರಾನ್ಸಿಸ್ ರವರು ಪೂಜ್ಯ ಜೋಸ್ಪೆಫ್ ವೌಟರ್ಸ್ ಅಬ್ಬೋಟ್, ಜನರಲ್ ಆಫ್ ಕ್ಯಾನನ್ಸ್ ರೆಗ್ಯುಲರ್ ಆಫ್ ಪ್ರಿಮಾಂಟ್ರೆಯಲ್ಲಿನ ಸದಸ್ಯರುಗಳಿಗೆ ಪತ್ರದ ಮೂಲಕ' ಪ್ರಿಮಾನ್ಟ್ರಾಟ್ಟೆಂಟಿಯನ್ನರು ಶಾಂತಿ ಹಾಗೂ ದಿವ್ಯ ಬಲಿಯರ್ಪಣೆಯ ಪ್ರೇಷಿತರಾಗಿ, ದೈವವಾಣಿಯ ಬೋಧಕರಾಗಿದ್ದು, ಯಾರಿಗೊಬ್ಬರಿಗಾದರೂ ಸರಳವಾಗಿ ಪ್ರಾರ್ಥಿಸುವವರಾಗಿ, ತೆರೆದ ಹೃದಯೆದವರಾಗಿದ್ದ ಸಂತ ನಾರ್ಬರ್ಟ್ ರವರ ಗುಣಧರ್ಮಗಳತ್ತ ಬೆಳಕು ಚೆಲ್ಲಿದ್ದಾರೆ. ತನ್ನ ಪ್ರಥಮ ಸಭೆ, ಪ್ರಿಮಾನ್ಸ್ಟ್ರೆಂಟಿಯನ್ನರ ಅಥವಾ ನಾರ್ಬಾಟೈನ್ ರ ಮೂಲ ಸ್ಥಳವಾದ ಅಬ್ಬೆ ಆಫ್ ಪ್ರಿಯಾಂಟ್ರೆಯಲ್ಲಿ 900 ನೇ ಜ್ಯೂಬಿಲಿ ಆಚರಣೆ ಸಮಾರಂಭಕ್ಕೆ ವಿಶ್ವಗುರುಗಳ ಪತ್ರ ರವಾನೆಯಾಗಿತ್ತು.
ನವೀನ ಸೂಕ್ಷ್ಮತೆ:
ವಿಶ್ವಗುರು ಫ್ರಾನ್ಸಿಸ್ ರವರು ಪತ್ರದ ಮುಖೇನ ' ಸಂತ ನಾರ್ಬರ್ಟ್ ರವರು 1075 ನೇ ಇಸವಿಯಲ್ಲಿ ಜರ್ಮನಿಯ ಗ್ಸೆಂಟನ್ ಎಂಬಲ್ಲಿ ಜನಿಸಿದರು. ಅವರು ' ಗ್ರೆಗೋರಿಯನ್ ಸುಧಾರಣೆ 'ಯ ಮಹಾ ಶಿಲ್ಪಿಗಳಲ್ಲೊಬ್ಬರು. ಅವರು ದೈವಕರೆ ಹಾಗೂ ಜೀವನ ರೀತಿಗಳನ್ನು ಅರಿತಿದ್ದರು. ಧರ್ಮಸಭೆಯು ಹೊಸ ಬೆಳವಣಿಗೆ ಮತ್ತು ಹೊಸ ದೃಷ್ಟಿಕೋನಗಳತ್ತ ಸಾಗಿದಾಗ, ದೈವ ಪ್ರೇರೇಪಿತ ಸ್ತ್ರೀ-ಪುರುಷರ ಲಭ್ಯತೆಗೆ ಕೊರತೆಯೇನೂ ಇರಲಿಲ್ಲ, ಆದರೆ ಧರ್ಮಸಭೆಯ ಅಧಿಕಾರಶಾಹಿತ್ವ ಮತ್ತು ಲೌಕಿಕತೆ ಬಗ್ಗೆ ಪ್ರಶ್ನೆಗಳೇಳುತ್ತಿದ್ದ ಸಮಯವದು, ಸಂತ ನಾರ್ಬಾಟ್ರ್ರವರು ಪ್ರಶ್ನೆಕಾರರಲ್ಲೊಬ್ಬರಾಗಿದ್ದರು. ವಿಶ್ವಗುರುಗಳು ಹಾಗೆಂದು ಉಲ್ಲೇಖಿಸುತ್ತಾ ‘ಸಂತರು ಧರ್ಮಸಭೆಯ ಸ್ಥಾನಮಾನವನ್ನು ಪರಿತ್ಯಜಿಸಿ, ಪ್ರೇಷಿತರ ಪಥದಲ್ಲಿ ನಡೆದರು., ಸಂತ ಆಗಸ್ಟೀನ್ ರವರ ನೇಮಾವಳಿಗಳನ್ನು ತಮ್ಮದಾಗಿಸಿ, ಆಲ0ಗಿಸಿಕೊಂಡಿದ್ದರು.' ಎಂಬುದಾಗಿ ಬರೆದಿದ್ದಾರೆ. ತಮ್ಮ ಪತ್ರವನ್ನು ಮುಂದುವರೆಸುತ್ತಾ' ನಿಮ್ಮ ಸಭೆ 9 ಶತಮಾನಗಳಿಂದಲೂ ಸಂಪ್ರದಾಯಕತ್ವವನ್ನು ಆಲಂಗಿಸಿಕೊಂಡು ಬಂದಿದೆ. ಸಂತ ಆಗಸ್ಟೀನ್ರ ನೇಮಗಳನ್ನು ಸಾಧಿಸುವ ಗುರಿ ಹೊಂದಿದೆ. ಧ್ಯಾನಾಸಕ್ತತೆಯಲ್ಲಿ ನಂಬಿಕೆ, ಶುಭಸಂದೇಶ ಬೋಧನೆ, ಮತ್ತು ಪೂಜಾ ವಿಧಿಗಳ ರಹಸ್ಯದತ್ತ ಸೆಳೆಯುವುದರಲ್ಲಿ ಈ ಸಭೆಯು ಧರ್ಮಸಭೆಯ ಜೀವದ ಆಕಾರ ಮತ್ತು ಶಿಖರವಾಗಿದೆ' ಎಂದಿದ್ದಾರೆ.
ಶುಭಸಂದೇಶದ ಸಾಕ್ಷಾತ್ಕಾರತೆ:
ವಿಶ್ವಗುರುಗಳ ಉಲ್ಲೇಖನದಂತೆ ಅಂದಿನ ವಿಶ್ವಗುರು ದ್ವಿತೀಯ ಗೆಲೇಷಿಯಸ್ ರನ್ನು ಸಂಧಿಸಿದ ಸಂತ ನಾರ್ಬಾರ್ಟ್ ರವರು, ಅವರ ಅನುಮತಿ ಮೇರೆಗೆ ಬೋಧಕ ಪ್ರೇಷಿತರಾಗಿ ಕಾರ್ಯ ಕೈಗೊಂಡರು. ಸಹೋದರರೇ, ಇಂದು ಶುಭಸಂದೇಶದ ಬೋಧನೆಯ ಅವಶ್ಯಕತೆ ಇದೆ. ಪ್ರತಿಯೊಬ್ಬರಿಂದಲೂ ಇದರ ಅಗತ್ಯವಿದೆ. ವಿಶೇಷವಾಗಿ ಗುರುಗಳಲ್ಲಿ, ಬರೀ ಉದಾತ್ತ ನಿμÉ್ಠಯμÉ್ಟೀ ಅಲ್ಲ, ತಾವು ಬೋಧಿಸುವ ಸಂದೇಶವು ತಮ್ಮ ದಿನನಿತ್ಯದ ಸಭೆಯ ಜೀವನದೊಂದಿಗೆ ಗಾಢವಾದ ಏಕೀಭವನ ಹೊಂದಿರಬೇಕು' ಎಂದಿದ್ದಾರೆ. ನಂತರ ವಿಶ್ವಗುರುಗಳು ಅವರಿಗೆ ಬರೆಯುತ್ತಾ" ಸಂತರು ಶುಭಸಂದೇಶದ ವಿಶ್ವಾಸಿ ಸೇವಕ. ಮತ್ತು ಧರ್ಮಸಭೆಯ ಪ್ರಿಯ ಪುತ್ರರು, ವಿಶ್ವಗುರಗಳ ವಿಧೇಯ"ರಾಗಿದ್ದರು. ಹೀಗಿದ್ದಾಗ, ಅವರು ರೋಗಿಗಳನ್ನು ಸ್ವಸ್ಥಪಡಿಸಿದರು. ದುಷ್ಟ ಶಕ್ತಿಗಳನ್ನು ಹೊರಗಟ್ಟಿದರು. ಹಾಗೂ ರಾಜಮನೆತನದವರಲ್ಲಿ ನೆಲೆಸಿದ್ದ ವೈಷಮ್ಯಗಳನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾದರು. ಇದರಿಂದಾಗಿ ಸಂತರನ್ನು " ಶಾಂತಿಯ ಪ್ರೇಷಿತರು" ಎಂದು ಪರಿಗಣಿಸಲಾಗಿತ್ತು.
ತೆರೆದ ಬಾಗಿಲುಗಳು:
1121 ನೇ ಇಸವಿಯಲ್ಲಿ, ಸಂತ ನಾರ್ಬರ್ಟ್ ರವರು ಪ್ರಿಮಾಂಟ್ರೆಯ ಕಣಿವೆ ಪ್ರದೇಶವನ್ನು ಆರಿಸಿ, ತಮ್ಮ ಹಿಂಬಾಲಕರನ್ನು ಒಟ್ಟುಗೂಡಿಸಿದರು. ಮತ್ತು ತಮ್ಮ ಪ್ರಥಮ ಸಭೆಯನ್ನು ಸ್ಥಾಪಿಸಿದರು. ‘ಪ್ರಾರ್ಥನೆಗಾಗಿ ಮತ್ತು ಧರ್ಮಸಭೆಯೊಂದಿಗಾಗಿ' ಎಂಬುದೇ ಸಭೆಯ ಧ್ಯೇಯ. ಪ್ರಿಮಾಂಟ್ರೆಯ ಸುತ್ತಮುತ್ತ ಆಕರ್ಷಣಿಯವಾಗಿತ್ತು, ಅಲ್ಲಿ ಕಠಿಣ ಧಾರ್ಮಿಕ ಜೀವನ ನಡೆಸಲಾಗುತ್ತಿತ್ತು. ಅಂತಹುದರಲ್ಲೇ ಅತಿಥಿ ಸತ್ಕಾರ, ಬಡಬಗ್ಗರ ಮತ್ತು ಯಾತ್ರಿಕರ ಆರೈಕೆಗಳೆಲ್ಲವೂ ಧಾರ್ಮಿಕ ಜೀವನದ ಸಮಗ್ರ ಅಂಶಗಳಾಗಿದ್ದವು.
ವಿಶ್ವಾಸದ ಮಾದರಿ:
ವಿಶ್ವಗುರುಗಳು ಗಮನಿಸಿದಂತೆ, ದಿವ್ಯಬಲಿಯರ್ಪಣೆಯಲ್ಲಿ, ಸಂತ ನಾರ್ಬರ್ಟ್ ಉ್ಪ್ಮ ನಿರಂತರ ಅತೀ ಶಕ್ತಿಯನ್ನು ಪಡೆದುಕೊಳ್ಳುತ್ತಿದ್ದರು. ಆದ್ದರಿಂದ ಅವರು ಪ್ರತಿಯೊಬ್ಬರಿಗೂ, ಪ್ರತ್ಯೇಕವಾಗಿ ಗುರುಗಳಿಗೆ ವಿಶ್ವಾಸದ ಮಾದರಿಯಾಗಿದ್ದರು. ಇನ್ನು ವಿಶ್ವಗುರುಗಳು ನೆನಪಿಗೆ ತಂದ ಸಂಗತಿಯೆಂದರೆ ಅನೇಕ ಮಹಿಳೆಯರು ನಾರ್ಬರ್ಟೈನ್ ಆದರ್ಶಗಳನ್ನು ಅನುಸರಿಸಿ, ತಮ್ಮ ಜೀವನವನ್ನು ಚಿಂತನ, ಧ್ಯಾನಗಳಿಗೆಂದೇ ಮುಡಿಪಾಗಿರಿಸಿದರು. ಜೊತೆಗೆ ಅನೇಕ ಧಾರ್ಮಿಕ ಸಭೆಗಳೂ, ಸಂತರ ಆಧ್ಯಾತ್ಮಿಕತೆಯಲ್ಲಿ ಭಾಗಿಗಳಾಗಿ, ಅಪೆÇೀಸ್ತಲರ ಕಾರ್ಯಗಳಿಗೂ, ಸೇವಾ ಕಾರ್ಯಗಳಿಗೂ ತಮ್ಮನ್ನು ಸಮರ್ಪಿಸಿಕೊಂಡರು. ಈ ರೀತಿಯಲ್ಲಿ ಪ್ರಿಮಾನ್ಸ್ಟ್ರೇಟಿನ್ಸ್ ಆಶ್ರಮ ಮತ್ತು ಧರ್ಮಕೇಂದ್ರಗಳ ನಡುವಿನ ಸಂಪರ್ಕ ಬಲಗೊಂಡಿದ್ದು ಸಂತ -ನಾಬರ್ಟ್ ರ ಬೋಧನೆ ಅಜರಾಮರವಾಯಿತು.
ವಿಶ್ವಗುರುಗಳು ತಮ್ಮ ಪತ್ರದಲ್ಲಿ ಆಶೀರ್ವಚನ ನೀಡುತ್ತಾ, ಪ್ರಿಮಾನ್ಸ್ಟ್ರೇಟಿಯನ್ನರುಗಳಿಗೆ “ಈಗ ಐದು ಖಂಡಗಳಲ್ಲೂ ಹರಡಿ ಹೋಗಿ ಪ್ರೇಷಿತರ ಉದಾಹರಣೆಯಂತೆ ತಮ್ಮ ಆಯ್ಕೆಯ ಜೀವನದಲ್ಲಿ ನಿರಂತರ ವಿಶ್ವಾಸದಿಂದಿರಿ” ಎಂದು ಉಪದೇಶಿಸಿದ್ದಾರೆ.
ಜೂನ್ 06, 2021, 16:06
ಕನ್ನಡಕ್ಕೆ: ಮೇರಿ ಎಲಿಜಬೆತ್
Comentários