top of page
Writer's pictureBangaloreArchdiocese

ಧರ್ಮಾಧ್ಯಕ್ಷೀಯ ಸಮ್ಮೇಳನವು ಸಿನೊಡ್ ಸಮ್ಮೇಳನದ ಸಂಭಾಷಣೆಯ ಫಲವಾಗಿದೆ- ಕಾರ್ಡಿನಲ್ ಗ್ರೆಚ್


ಮುಂದಿನ ಎಲ್ಲಾ ಧರ್ಮಾಧ್ಯಕ್ಷೀಯ ಸಮ್ಮೇಳನಗಳ ನಡುವೆ ಸಿನೊಡ್ ಸೇರ್ಪಡೆಗೊಳ್ಳುವ ಪ್ರಕ್ರಿಯೆಯನ್ನು ಕಾರ್ಡಿನಲ್ ಗ್ರೆಚ್ ರವರು ಚರ್ಚಿಸಿದರು.


ವಾಟಿಕನ್ ಸುದ್ಧಿ ಸಿಬ್ಬಂದಿ ಬರಹಗಾರರಿಂದ


ವಿಶ್ವಗುರು ಫ್ರಾನ್ಸಿಸ್ ರವರು ತಮ್ಮ ಅಧಿಕಾರದ ಆರಂಭದಿಂದಲೂ ಧರ್ಮಸಭೆ ,"ಜನರನ್ನು ಪ್ರಯಾಣಕ್ಕೆ ಸಜ್ಜುಗೊಳಿಸುವ ಒಂದು ತಾಣ" ಎಂದು ಹೇಳಿದ್ದಾರೆ,  ಮತ್ತು ಅದು ಕುರುಬರ ಹಿಂಡುಗಳ ಮುಖ್ಯಸ್ಥಾನವನ್ನು ಪಡೆದುಕೊಂಡಿದೆ. ಧರ್ಮಸಭೆ ಎಂದರೆ ಪವಿತ್ರಾತ್ಮರನ್ನು ಪಡೆದುಕೊಳ್ಳುವ, ಅವರನ್ನು ಅನುಸರಿಸುವ ಹಿಂಬಾಲಕರಾಗಿದ್ದಾರೆ, ಈ ಕನ್ವಿಕ್ಷನ್ ಒಂದು ಪ್ರಮಾಣದ ಆಧಾರದಲ್ಲಿದೆ, ಅದು ಹಿಂದಿನ ಕಾಲಕ್ಕೆ ಸಂಬಂಧಿಸಿದಂತೆ ಹೊಸ ರೀತಿಯಲ್ಲಿ, ಅಂದರೆ ಅಕ್ಟೋಬರ್ ೨೦೨೩ ರಲ್ಲಿ ಧರ್ಮಾಧ್ಯಕ್ಷೀಯ ಸಿನೊಡ್ ಸಮ್ಮೇಳನವನ್ನು ತಯಾರಿಸಲು ಮತ್ತು ಬದುಕಲು ಕಾರಣವಾಗುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳುತ್ತಾ, ಪ್ರತಿಯೊಂದು ಆದೇಶಗಳನ್ನು ಮತ್ತು ಪದವಿಗಳನ್ನು ಒಳಗೊಳ್ಳುವ ವಿವಿಧ ಹಂತಗಳಲ್ಲಿ ನಿಷ್ಠಾವಂತರನ್ನು ಸೇರಿಸಲು ಅನುಮತಿಸಬೇಕಾಗುತ್ತದೆ. ಎಂದರು.


ಕಾರ್ಯದರ್ಶಿಯ ನೇತೃತ್ವದಲ್ಲಿ ಪ್ರತಿಯೊಂದು ಕಾರ್ಯಗಳು ಒಳ್ಳೆಯ ಹಾದಿಯಲ್ಲಿ ಸಾಗುತ್ತಿದೆ ಮತ್ತು ಜೂನ್ ೧೪ರಂದು ಪ್ರಾರಂಭವಾದ ಮತ್ತು ಜೂನ್ ೧೮ ರವರೆಗೆ ನಡೆಯಲಿರುವ ವರ್ಚುವಲ್ ಮೋಡ್ ಸರಣಿಯನ್ನು ಸಹ ಮಾಡಲು ಉದ್ದೇಶಿಸಲಾಗಿದೆ ಎಂದು ಧರ್ಮಾಧ್ಯಕ್ಷೀಯ ಸಿನೊಡ್  ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಕಾರ್ಡಿನಲ್ ಮಾರಿಯೋ ಗ್ರೆಚ್ ಒತ್ತಿಹೇಳಿದರು. ಹಾಗೆಯೇ ಸಿನೊಡ್ ನ ಪ್ರಕ್ರಿಯೆಯ ಬಗ್ಗೆ ಹೆಚ್ಚು ಗಮನ ಹರಿಸಿ ಅದರ ಬಗ್ಗೆ ಚರ್ಚಿಸಿ, ಸರಿಯಾದ ನಿಲುವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.


ವ್ಯಾಟಿಕನ್ ಸುದ್ಧಿಯೊಂದಿಗೆ ಮಾತನಾಡುತ್ತಾ ಅಲೆಸ್ಸಾಂಡ್ರೊ ಡಿ ಕರೋಲಿಸ್

ಮುಂದಿನ ಸಿನೊಡ್ ಗೆ ವಿವರಗಳನ್ನು ಅಂದರೆ - ಅಕ್ಟೋಬರ್ ೨೦೨೩ ರಲ್ಲಿ ನಡೆಯಬೇಕಾಗಿರುವ ಸಮ್ಮೇಳ-  ಪ್ರಕಟಿಸುವ ಮೊದಲು "ನಾವು ಧರ್ಮಾಧ್ಯಕ್ಷೀಯ ಸಮ್ಮೇಳನಗಳ ಕಾನ್ಟಿನೆಂಟಲ್ ಸಭೆಯ ಅಧಕ್ಷರೊಂದಿಗೆ ಸಂಪರ್ಕ ಸಾಧಿಸುವ ಒಂದು ಅಂಶವನ್ನು ಮಾಡಿದ್ದೇವೆ ಅವರು ಈ ಯೋಜನೆಯಲ್ಲಿ ಪಾಲುದಾರರಾಗಲು ತಮ್ಮನ್ನು ತೊಡಗಿಸಿಕೊಳ್ಳಬೇಕು" ಎಂದು ತಿಳಿಸಿದರು.


ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಹೊಸ ವಿವರದೊಂದಿಗೆ ಡಾಕ್ಯುಮೆಂಟ್ ಪ್ರಕಟವಾದ ನಂತರ "ನಾವು ವಿಶ್ವದ ಪ್ರತಿಯೊಂದು ಧರ್ಮಾಧ್ಯಕ್ಷೀಯ ಸಮ್ಮೇಳನಗಳ ಅಧ್ಯಕ್ಷರು ಮತ್ತು ವಿವಿಧ ಪ್ರಧಾನ ಕಾರ್ಯದರ್ಶಿಗಳನ್ನು ಸಂಪರ್ಕಿಸುತ್ತೇವೆ ಮತ್ತು ಸಂವಾದನೆ ನಡೆಸುತ್ತೇವೆ" ಎಂದು ಸ್ಪಷ್ಟಪಡಿಸಿದರು.


ಕಾರ್ಡಿನಲ್ ಗ್ರೆಚ್  ಈ ವಿಷಯಕ್ಕೆ ಒತ್ತನ್ನು ನೀಡುತ್ತಾ, "ನಾವು ಈ ಸಂವಾದವನ್ನು ಪ್ರಾರಂಭಿಸಲು ಬಯಸುತ್ತೇವೆ ಮತ್ತು ಅವರನ್ನು ಈ ಯೋಜನೆಯಲ್ಲಿ ಪಾಲುದಾರರಾಗಿ ಭಾಗವಹಿಸಲು ಬಯಸುತ್ತೇವೆ, ಇದರಿಂದ ಅವರು ಹೆಚ್ಚಿನ ಸೃಷ್ಟಿಕರಣಗಳ ಪ್ರಶ್ನೆಗಳನ್ನು ಹಾಕುವುದಕ್ಕೆ ಮಾತ್ರ ಸೀಮಿತವಾಗಿರದೆ, ಕೆಲವು ಸಲಹೆಗಳನ್ನು ಸಹ ನೀಡುಬಹುದು ಮತ್ತು

ನಾವು ಅವುಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ. ಇದು ಸಿನೊಡ್ ಪ್ರಕ್ರಿಯೆಯ ಹೊಸ ಆಲೋಚನೆಯಾಗಿದೆ ಎಂದು ತಿಳಿಸಿದರು.


16 ಜೂನ್ 2021, 10:11


ಕನ್ನಡಕ್ಕೆ: ಗಾಯತ್ರಿ

38 views0 comments

Comments


bottom of page