ಇಟಲಿಯಲ್ಲಿ ನಡೆದ “ಜನರಲ್ ಸ್ಟೇಟ್ಸ್ ಆಫ್ ಬರ್ತ್” ಕುರಿತ ಸಭೆಯಲ್ಲಿ ಪೆÇೀಪ್ ಫ್ರಾನ್ಸಿಸ್ ಐಕ್ಯತೆಯ ಮಹತ್ವ, ಜನನ ಪ್ರಮಾಣವನ್ನು ಸುಧಾರಿಸುವುದು, ಕುಟುಂಬವನ್ನು ರಕ್ಷಿಸುವುದು ಮತ್ತು ಪೀಳಿಗೆಗಳ ಸುಸ್ಥಿರತೆಯ ಬಗ್ಗೆ ಬೆಳಕು ಚೆಲ್ಲಿದರು.
ವ್ಯಾಟಿಕನ್ ನ್ಯೂಸ್ ಲೇಖಕ ಸಿಬ್ಬಂದಿಯಿಂದ
ವ್ಯಾಟಿಕನ್ ಸಮೀಪದ ಡೆಲ್ಲಾ ಕಾನ್ಸಿಲಿಯಾಜಿಯೋನ್ ಸಭಾಂಗಣದಲ್ಲಿ ಶುಕ್ರವಾರ, ಮೇ 7 ರಂದು ನಡೆದ “ಜನರಲ್ ಸ್ಟೇಟ್ಸ್ ಆಫ್ ಬರ್ತ್” ಕುರಿತ ಸಭೆಯನ್ನು ಪೆÇೀಪ್ ಫ್ರಾನ್ಸಿಸ್ ಉದ್ಘಾಟಿಸಿದರು ಪ್ರಾರಂಭಿಸಿದರು.
“ಫೆÇೀರಂ ಫಾರ್ ಫ್ಯಾಮಿಲಿ ಅಸೋಸಿಯೇಷನ್ಸ್” ಆಯೋಜಿಸಿದ ಈ ಸಭೆಯು ಇಟಲಿಯ ಜನಸಂಖ್ಯಾ ಬಿಕ್ಕಟ್ಟಿನ ಬಗ್ಗೆ ವಿಸ್ತೃತವಾಗಿ ಚರ್ಚಿಸವ ಗುರಿಯನ್ನು ಹೊಂದಿತ್ತು. ಪ್ರಸ್ತುತ ಕಾಡುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಕುಟುಂಬಗಳಲ್ಲಿ ಬಡತನದ ಮಟ್ಟ ಹೆಚ್ಚಾಗಿದ್ದು, ಈ ಬಿಕ್ಕಟ್ಟು ಮತ್ತಷ್ಟು ಮುನ್ನೆಲೆಗೆ ಬಂದಿದೆ.
ಸಭೆಯು ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಅವರನ್ನೂ ಸೇರಿದಂತೆ ಅನೇಕ ತಜ್ಞರು ಮತ್ತು ಉನ್ನತ ಮಟ್ಟದ ಅಧಿಕಾರಿಗಳನ್ನು ಒಟ್ಟುಗೂಡಿಸಿತು. ತಮ್ಮ ಭಾಷಣದಲ್ಲಿ, ಪೆÇೀಪ್ ಫ್ರಾನ್ಸಿಸ್ ಈ ಸಭೆಯ ಅಯೋಜನೆಯನ್ನು ಶ್ಲಾಘಿಸುತ್ತಾ, ಇಟಲಿಯು "ಜೀವನದ ಅರಂಭ ಮತ್ತು ಮಾನವನೊಂದಿಗೆ ಮತ್ತೆ ಚಲಿಸುವ ಅವಶ್ಯಕತೆಯಿದೆ” ಎಂದು ಒತ್ತಿ ಹೇಳಿದರು.
ಜನನ ಪ್ರಮಾಣದ ಕುಸಿತ
ದೇಶದ ಜನಸಂಖ್ಯಾ ಪರಿಸ್ಥಿತಿಯ ಹಿನ್ನಲೆಯನ್ನು ತೆರೆದಿಡುತ್ತಾ, ಪೆÇೀಪ್ ಫ್ರಾನ್ಸಿಸ್ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, “ಬಹುತೇಕ ಯುವಕರು ಮಕ್ಕಳನ್ನು ಹೊಂದಲು ಬಯಸುತ್ತಾರಾದರೂ, ಅವರ ಜೀವನದ ಕನಸುಗಳು ಕತ್ತಲೆ ಹಾಗೂ ಶೀತ ಆವರಿಸಿರುವ ಜನಸಂಖ್ಯಾ ಶಾಸ್ತ್ರದ ಚಳಿಗಾಲದೊಂದಿಗೆ ಘರ್ಷಣೆಗೆ ಇಳಿದಿದೆ. ಕೇವಲ ಅರ್ಧದಷ್ಟು ಯುವಕರು ಮಾತ್ರ ತಮ್ಮ ಜೀವಿತಾವಧಿಯಲ್ಲಿ ಇಬ್ಬರು ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತದೆ ಎಂಬುದಾಗಿ ನಂಬಿರುತ್ತಾರೆ” ಎಂದರು.
ಪೆÇೀಪ್ ಫ್ರಾನ್ಸಿಸ್ ಮುಂದುವರಿಸುತ್ತಾ ”ಇಟಲಿಯು ಇಡೀ ಯುರೋಪಿನಲ್ಲಿ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು, ಅದನ್ನು ಹಳೆಯ ದೇಶವಾಗಿನ್ನಾಗಿಸಿದೆ. ಆದರೆ ’ಹಳೆಯ’ ಎನ್ನುವುದು ಅದರ ಇತಿಹಾಸದ ಕಾರಣದಿಂದಾಗಿ ಅಲ್ಲ, ಆದರೆ ಹೆಚ್ಚು ವಯಸ್ಸಾದ ಜನರಿಂದಾಗಿ. ವಾಸ್ತವದಲ್ಲಿ, ಇಟಲಿಯು ರಾಷ್ಟ್ರೀಯ ಏಕತೆಯ ನಂತರದ ಸಮಯದಲ್ಲಿ 2020ರಲ್ಲಿಯೇ ಅತ್ಯಂತ ಕಡಿಮೆ ಜನನ ಪ್ರಮಾಣವನ್ನು ತಲುಪಿದೆ. ಇದು ಕೋವಿಡ್ 19 ರ ಕಾರಣದಿಂದಾಗಿ ಅಲ್ಲ, ಆದರೆ ಸತತ ಇಳಿಮುಖವಾದ ಪ್ರಗತಿ, ಸದ್ಯದ ಪರಿಸ್ಥಿತಿ ಹಾಗೂ ಒರಟಾದ ಚಳಿಗಾಲದಿಂದಾಗಿ."
“ಇದಲ್ಲದೆ, ನಮ್ಮ ಇಟಲಿಯ ಅಧ್ಯಕ್ಷರು ಜನನ ಪ್ರಮಾಣವು ಈ ಸಮಯದ ಅತ್ಯಂತ ನಿರ್ಣಾಯಕ ಉಲ್ಲೇಕಾರ್ಹ ಅಂಶವಾಗಿದೆ ಎಂದಿದ್ದಾರೆ. ಏಕೆಂದರೆ ಕುಟುಂಬಗಳು ಕೇವಲ ಇಟಲಿಯನ್ನು ಒಟ್ಟುಗೂಡಿಸುವ ಅಂಗಾಂಶಗಳಲ್ಲ, ಕುಟುಂಬಗಳೇ ಇಟಲಿಯಾಗಿದೆ ಎಂಬುದನ್ನು ಒತ್ತಿ ಹೇಳಿದ್ದಾರೆ”
ಕುಟುಂಬವನ್ನು ರಕ್ಷಿಸುವುದು
ಈ ಪರಿಸ್ಥಿತಿಯ ನಿವಾರಣೆಗೆ, ಕುಟುಂಬಗಳನ್ನು ಅದರಲ್ಲೂ ತಮ್ಮ ಜೀವನದ ಯೋಜನೆಗಳು ದುರ್ಬಲಗೊಳ್ಳುವ ಚಿಂತೆಯಲ್ಲಿರುವ ಯುವ ಕುಟುಂಬಗಳನ್ನು ಪೆÇೀಷಿಸುವ ಪ್ರಾಮುಖ್ಯತೆಯ ಬಗ್ಗೆ ಬೆಳಕು ಚೆಲ್ಲಿದರು. ಉದ್ಯೋಗಗಳ ಅನಿಶ್ಚಿತತೆ, ಮಕ್ಕಳನ್ನು ಪೆÇೀಷಿಸಿ, ಬೆಳೆಸುವಲ್ಲಿ ಬೆಳೆಯುತ್ತಿರುವ ವೆಚ್ಚಗಳು, ಶಾಲೆ ಮತ್ತು ಉದ್ಯೋಗದಿಂದಾಗಿ ಹೆಚ್ಚುವರಿ ಕೆಲಸ ಮಾಡಬೇಕಾದ ಕುಟುಂಬಗಳು, ಕುಟುಂಬದ ಪಾಲನೆಯಲ್ಲಿ ಪೆÇೀಷಕರು ಮತ್ತು ಅಜ್ಜ ಅಜ್ಜಿಯರು ನಿರ್ವಹಿಸಬೇಕಾದ ವಿವಿಧ ಪಾತ್ರಗಳು ಎಲ್ಲದರ ಕಡೆ ಪೆÇೀಪ್ ಫ್ರಾನ್ಸಿಸ್ ತಮ್ಮ ಚಿಂತನೆಯನ್ನು ಹರಿಬಿಟ್ಟರು.
ಇದೇ ಸಮಯದಲ್ಲಿ ತಮ್ಮ ಉದ್ಯೋಗದ ಕಾರಣ ಮಕ್ಕಳನ್ನು ಹಡೆಯುವುದಲ್ಲಿ ಪೆÇ್ರೀತ್ಸಾಹ ದೊರಕದ ದುಡಿಯುವ ಮಹಿಳೆಯರ ದುಃಖದ ಬಗ್ಗೆಯೂ, ಅಥವಾ ಉಬ್ಬಿರುವ ಹೊಟ್ಟೆಯನ್ನು ಮರೆ ಮಾಚಬೇಕಾದವರ ನೋವಿನ ಬಗ್ಗೆಯೂ ಪೆÇೀಪ್ ವಿμÁದಿಸಿದರು.
"ಇದಕ್ಕಾಗಿ ಮಹಿಳೆಯಲ್ಲ ಆದರೆ ಸಮಾಜವು ನಾಚಿಕೆ ಪಡಬೇಕು. ಏಕೆಂದರೆ ಹೊಸ ಜೀವವನ್ನು ಸ್ವಾಗತಿಸದ ಸಮಾಜವು ಜೀವಿಸುವುದನ್ನು ನಿಲ್ಲಿಸುತ್ತದೆ. ಜನರು ಮರುಜನ್ಮ ಪಡೆಯುವ ಭರವಸೆಯನ್ನು ತರಬಲ್ಲವರು ಮಕ್ಕಳೇ! " ಎಂದರು.
ಜನಿಸಿದ ಪ್ರತಿ ಮಗುವಿಗೆ ಭತ್ಯೆ ನೀಡುವ ಕಾನೂನಿನ ಅವಶ್ಯಕತೆಯ ಬಗ್ಗೆ ಪೆÇೀಪ್ ಸಭೆಯಲ್ಲಿ ಪ್ರಸ್ತಾಪಿಸುತ್ತಾ, “ಇದು ಕುಟುಂಬಗಳ ವಾಸ್ತವಿಕ ಅಗತ್ಯಗಳನ್ನು ಪೂರೈಸಲು ದೂರಗಾಮಿ ಆಲೋಚನೆಯಾಗುತ್ತದೆ. ಅಲ್ಲದೆ ಸಾಮಾಜಿಕ ಸುಧಾರಣೆಗಳ ಪ್ರಾರಂಭಕ್ಕೆ ನಾಂದಿ ಹಾಡಿ, ಮಕ್ಕಳು ಹಾಗೂ ಕುಟುಂಬಗಳನ್ನು ಸಮಾಜದ ಕೇಂದ್ರ ಸ್ಥಾನದಲ್ಲಿರಿಸುತ್ತದೆ” ಎಂದು ಹೇಳಿದರು.
“ಕುಟುಂಬಗಳು ಪ್ರಸ್ತುತ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿರದಿದ್ದರೆ ನಮಗೆ ಭವಿಷ್ಯವಿರುವುದಿಲ್ಲ; ಆದರೆ ಕುಟುಂಬಗಳು ಮತ್ತೆ ಪ್ರಾರಂಭಗೊಳ್ಳಲು ಆರಂಭಿಸಿದರೆ , ಎಲ್ಲವೂ ಪುನರಾರಂಭಗೊಳ್ಳುತ್ತದೆ,” ಎಂದು ಅವರು ಒತ್ತಿ ಹೇಳಿದರು.
ಉಡುಗೆ
ಪೆÇೀಪ್ ನಂತರ "ಜನಸಂಖ್ಯಾಶಾಸ್ರ್ತದ ಚಳಿಗಾಲ" ದ ಹಾದಿಯಿಂದ ಹೊರಬರುವ ಮೂರು ಉಪಯುಕ್ತವಾದ ಅಶಯಗಳನ್ನು ನೀಡಿದರು.
ಮೊದಲ ಅಶಯ, “ಉಡುಗೊರೆ” ಪದದ ಸುತ್ತ ಸುತ್ತುತ್ತದೆ.” ಪ್ರತಿ ಉಡುಗೊರೆಯನ್ನು ಸ್ವೀಕರಿಸಲಾಗುತ್ತದೆ, ಮತ್ತು ಪ್ರತಿಯೊಬ್ಬರೂ ಪಡೆದ ಮೊದಲ ಉಡುಗೊರೆಯೆಂದರೆ ಜೀವ. ಅದನ್ನು ಯಾರೂ ತನಗೇ ಕೊಡುವಂತಿಲ್ಲ. ಎಲ್ಲಕ್ಕಿಂತ ಮೊದಲೇ ಆ ಉಡುಗೊರೆ ಇತ್ತು. ನಾವೆಲ್ಲರೂ ಉಡುಗೊರೆಯನ್ನು ಸ್ವೀಕರಿಸಿದ್ದೇವೆ ಮತ್ತು ಅದನ್ನು ಮುಂದಕ್ಕೆ ರವಾನಿಸಲು ನಮಗೆ ಕರೆ ಇದೆ”
“ಒಂದು ಮಗುವು ಎಲ್ಲರಿಗೂ ಒಂದು ದೊಡ್ಡ ಕೊಡುಗೆಯಾಗಿದೆ ಮತ್ತು ಅದೇ ಎಲ್ಲಕ್ಕಿಂತ ಮೊದಲು.ವಯಸ್ಸಾದ ಜನಸಂಖ್ಯೆಗೆ ಕಾರಣವಾಗುವ ಮಕ್ಕಳ ಜನನದ ಕೊರತೆಯಿಂದಾಗಿ ಎಲ್ಲವೂ ನಮ್ಮೊಂದಿಗೆ ಕೊನೆಗೊಳ್ಳುತ್ತದೆ. ಇದು ನಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಮಾತ್ರ ಪರಿಗಣಿಸುತ್ತದೆ ಎಂಬುದನ್ನು ಸೂಚ್ಯವಾಗಿ ದೃಢಪಡಿಸುತ್ತದೆ. ಇದು ಹೆಚ್ಚಾಗಿ ಉದಾಸೀನ ಮತ್ತು ಐಕ್ಯತೆಯಿಲ್ಲದ ಶ್ರೀಮಂತ, ಗ್ರಾಹಕ ಕೇಂದ್ರಿತ ಸಮಾಜಗಳಲ್ಲಿ ಕಾಣಬರುತ್ತದೆ” ಎಂದು ಅವರು ಗಮನಿಸಿದರು.
“ಕೊಡುವ ಧೈರ್ಯ ಕಂಡುಕೊಳ್ಳುವ, ಜೀವವನ್ನು ಆಯ್ಕೆ ಮಾಡಿಕೊಳ್ಳುವ ಧೈರ್ಯವನ್ನು ಪಡೆಯಲು ಪ್ರತಿಯೊಬ್ಬರೂ ಪರಸ್ಪರ ಸಹಾಯ ಮಾಡಬೇಕೆಂದು” ಪೆÇೀಪ್ ಫ್ರಾನ್ಸಿಸ್ ರವರು ಕರೆ ನೀಡಿದರು. “ಏಕೆಂದರೆ ಅದು ಸೃಜನಶೀಲವಾದುದು, ಅದು ಕೂಡುತ್ತಾ ಅಥವಾ ಬೆಳೆಯುತ್ತಾ ಹೋಗುವುದಿಲ್ಲ ಆದರೆ ಹೊಸತನಕ್ಕೆ ತೆರೆದುಕೊಳ್ಳುತ್ತಾ ಹೋಗುತ್ತದೆ."
ಪೀಳಿಗೆಯ ಸುಸ್ಥಿರತೆ
ಪೆÇೀಪ್ ಅವರ ಎರಡನೆಯ ಆಶಯವು ’ಸುಸ್ಥಿರತೆಯ’ ಮೇಲೆ ಕೇಂದ್ರಿತವಾಗಿದೆ “ನಾವು ಆರ್ಥಿಕ, ತಾಂತ್ರಿಕ ಮತ್ತು ಪರಿಸರ ಸ್ಥಿರತೆಯ ಬಗ್ಗೆ ಮಾತನಾಡುವಾಗಲೂ, ಪೀಳಿಗೆಗಳ ಸುಸ್ಥಿರತೆಯನ್ನು ಸಹ ನಾವು ಪರಿಗಣಿಸಬೇಕು. ನಾವು ಕುಟುಂಬಗಳ ಮತ್ತು ಮಕ್ಕಳ ಬಗ್ಗೆ ಗಮನ ಹರಿಸದಿದ್ದರೆ ಉತ್ಪಾದನೆಯನ್ನು ಪೆÇೀಷಿಸಲು ಮತ್ತು ಪರಿಸರವನ್ನು ರಕ್ಷಿಸಲು ನಮಗೆ ಸಾಧ್ಯವಾಗುವುದಿಲ್ಲ. ಸುಸ್ಥಿರ ಬೆಳವಣಿಗೆ ಇಲ್ಲಿಂದಲೇ ಬರುತ್ತದೆ” ಎಂದು ಪೆÇೀಪ್ ಒತ್ತಿ ಹೇಳಿದರು.
ಈ ಹಿಂದೆ ಯುರೋಪನ್ನು ತಲ್ಲಣಗೊಳಿಸಿದ ಯುದ್ಧಗಳ ನಂತರದ ಪುನರ್ನಿರ್ಮಾಣದ ಹಂತಗಳಲ್ಲಿ, "ಜನನ ಪ್ರಮಾಣದ ಸ್ಫೋಟವಿಲ್ಲದೆ, ಯುವ ಪೀಳಿಗೆಯಲ್ಲಿ ವಿಶ್ವಾಸ ಮತ್ತು ಭರವಸೆಯನ್ನು ಮೂಡಿಸುವ ಸಾಮಥ್ರ್ಯವಿಲ್ಲದೆ ಪುನರ್ನಿರ್ಮಾಣ ಸಾಧ್ಯವಾಗಲಿಲ್ಲ" ಎಂದು ಅವರು ನೆನಪಿಸಿಕೊಂಡರು.
ಅವರು ಮುಂದುವರಿಸುತ್ತಾ, " ಇಂದು ನಾವು ಪುನಃ ಪ್ರಾರಂಭಿಸುವ ಪರಿಸ್ಥಿತಿಯ ಮಧ್ಯದಲ್ಲಿದ್ದೇವೆ. ಇದು ಕಷ್ಟಕರ ಸಮಯವಾದರೂ ನಿರೀಕ್ಷೆಗಳಿಂದ ತುಂಬಿದೆ. ಆದ್ದರಿಂದ, ಜನನ ಪ್ರಮಾಣ ಮತ್ತು ಸಾಂಕ್ರಾಮಿಕವು ನಮ್ಮಿಂದ “ಬದಲಾವಣೆ ಮತ್ತು ಜವಾಬ್ದಾರಿ”ಯನ್ನು ಬಯಸುತ್ತಾ ಇರುವುದರಿಂದ ನಾವು ಸಂಕುಚಿತ ದೃಷ್ಟಿಕೋನದ ಬೆಳವಣಿಗೆಯ ಮಾದರಿಗಳನ್ನು ಅನುಸರಿಸಲು ಸಾಧ್ಯವಿಲ್ಲ” ಎಂದು ಹೇಳಿದರು
ಶಾಲೆಗಳ ಪಾತ್ರ
ಪೆÇೀಪ್ ಫ್ರಾನ್ಸಿಸ್ ನಂತರ ಕುಟುಂಬಗಳ ಪ್ರಾಥಮಿಕ ಪಾತ್ರದ ಜೊತೆಗೆ ಶಾಲೆಗಳ ಪಾತ್ರವನ್ನು ಒತ್ತಿ ಹೇಳಿದರು.
"ಶಾಲೆಗಳು ವ್ಯಕ್ತಿಗಳ ಮೇಲೆ ಕಲ್ಪನೆಗಳನ್ನು ಸುರಿಸುವ ಕಾರ್ಖಾನೆಯಾಗಲು ಸಾಧ್ಯವಿಲ್ಲ; ಇದು ಚರ್ಚೆ ಮತ್ತು ಮಾನವ ಬೆಳವಣಿಗೆಗೆ ಸಹಾಯವಾಗುವಂತ ಸೌಕರ್ಯದ ಸಮಯವಾಗಿರಬೇಕು. ಶಾಲೆಯಲ್ಲಿ, ಒಬ್ಬರು ಶ್ರೇಣಿಗಳ ಮೂಲಕ ಮಾತ್ರವಲ್ಲದೆ ವ್ಯಕ್ತಿತ್ವಗಳ ಮುಖಾಮುಖಿಯ ಮೂಲಕ ಪ್ರಬುದ್ಧರಾಗಿ ಬೆಳೆಯುತ್ತಾರೆ.”
ಉದಾತ್ತ ಮಾದರಿಗಳ ಪ್ರಾಮುಖ್ಯತೆಗೆ ಒತ್ತು ನೀಡುತ್ತಾ ಪೆÇೀಪ್, “ಇದು ಹೃದಯ ಮತ್ತು ಮನಸ್ಸುಗಳನ್ನು ರೂಪಿಸುತ್ತದೆ. ವಿಶೇಷವಾಗಿ ಮನರಂಜನೆ ಮತ್ತು ಕ್ರೀಡಾ ಜಗತ್ತಿಗೆ ಹೆಚ್ಚಾಗಿ ತರೆದುಕೊಳ್ಳುವ ಯುವ ಜನಾಂಗಕ್ಕೆ ಯಾವಾಗಲೂ ಸುಂದರ, ಯುವ ಮತ್ತು ಸದೃಢವಾಗಿ ಕಾಣಿಸಿಕೊಳ್ಳುವ ಬಗ್ಗೆ ಕಾಳಜಿ ತೋರುವವರು ಆದರ್ಶವಾಗಿರುತ್ತಾರೆ.”
"ಯುವಜನರು ನೋಟದ ಆಕರ್ಷಣೆಗಳಿಗೆ ಮಾತ್ರ ಕೃತಜ್ಞತರಾಗಿರುವುದಿಲ್ಲ, ಬದಲಿಗೆ ದೊಡ್ಡ ಕನಸುಗಳನ್ನು ಹಿಂಬಾಲಿಸುವ ಧೈರ್ಯವನ್ನು ತೋರುವವರತ್ತ, ಇತರರಿಗಾಗಿ ತಮ್ಮನ್ನೇ ತ್ಯಾಗ ಮಾಡುವವರತ್ತ, ತಾವಿರುವ ಜಗತ್ತಿಗೆ ಒಳ್ಳೆಯದನ್ನು ಮಾಡುವವರತ್ತ ಅವರು ಆಕರ್ಷಿತರಾದಾಗ ಅವರು ಹೆಚ್ಚು ಪ್ರಬುದ್ಧರಾಗುತ್ತಾರೆ.
ರಚನಾತ್ಮಕವಾದ ಐಕ್ಯತೆ
ಪೆÇೀಪ್ ಪ್ರಸ್ತಾಪಿಸಿದ ಮೂರನೆಯ ಆಶಯ ’ಒಗ್ಗಟ್ಟು’. ಪೆÇೀಪ್ ಫ್ರಾನ್ಸಿಸ್ ರವರು ಮಾತನಾಡುತ್ತಾ ’ಕುಟುಂಬಗಳಿಗೆ ಹಾಗೂ ಜನನ ಪ್ರಮಾಣ ಹೆಚ್ಚಿಸಲು ಬೇಕಾದ ಸ್ಥಿರತೆಯನ್ನು ನೀಡುವ ರಚನಾತ್ಮಕವಾದ ಐಕ್ಯತೆಯ’ ಬಗ್ಗೆ ಹೇಳಿದರು. “ಇವುಗಳಿಗೆ ಆಡಳಿತ ನೀತಿ, ಅರ್ಥಿಕತೆ, ಮಾಹಿತಿ ಹಾಗೂ ಜನನ ಪ್ರಮಾಣವನ್ನು ಧೈರ್ಯವಾಗಿ ಉತ್ತೇಜಿಸುವ ಸಂಸ್ಕøತಿಯ ಅವಶ್ಯವಿದೆ” ಎಂದರು.
ಈ ವಿಷಯದಲ್ಲಿ ಪೆÇೀಪ್ ಫ್ರಾನ್ಸಿಸ್ ಅವರು “ತಕ್ಷಣಕ್ಕೆ ಒಪ್ಪಿತವಾದ ನೀತಿಗಳ ಹುಡುಕಾಟದ ಬದಲಾಗಿ ’ದೂರದೃಷ್ಟಿಯ, ಭವಿಷ್ಯದ ಕೌಟುಂಬಿಕ ನೀತಿಗಳ ಅವಶ್ಯಕತೆಯ ಬಗ್ಗೆ ಹೇಳುತ್ತಾ ಅವು ದೀರ್ಘಾವಧಿಯಲ್ಲಿ ಸರ್ವರ ಒಳಿತಿನ ಬೆಳವಣಿಗೆಯ ಮೇಲೆ ಅಧಾರವಾಗಿರಬೇಕು” ಎಂದರು.
“ಈ ನಿಟ್ಟಿನಲ್ಲಿ ಯುವಜನರಿಗೆ ಸಾಕಷ್ಟು ಸ್ಥಿರವಾದ ಉದ್ಯೋಗ, ಅವರ ಕುಟುಂಬಗಳಿಗೆ ಭದ್ರತೆ ಮತ್ತು ದೇಶವನ್ನು ಬಿಟ್ಟು ಹೋಗದಂತೆ ಪೆÇ್ರೀತ್ಸಾಹದ ಭರವಸೆಗಳನ್ನು ನೀಡುವ ತುರ್ತು ಅಗತ್ಯವಿದೆ” ಎಂದರು.
ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಅವರು ಕುಟುಂಬಗಳ ಸಾಮಾಜಿಕ ಮಾಹಿತಿ, ಅಂದರೆ ಜನರು ಮತ್ತೊಬ್ಬರ ಬಗ್ಗೆ ತಮ್ಮದೇ ಕುಟುಂಬದವರಂತೆ ಗೌರವದಿಂದ ಹಾಗೂ ಮೃದು ಭಾವದಿಂದ ಮಾತನಾಡವುದರ ಬಗ್ಗೆ ಹೇಳಿದರು. “ಇದೇ ಸಮಯದಲ್ಲಿ ಹಣ, ತ್ಯಾಗ ಮಾಡುವ ಕುಟುಂಬಗಳ ಹಾಗೂ ವ್ಯಕ್ತಿಗಳ ಸುತ್ತ ಗಿರಕಿ ಹೊಡೆಯುವ ತಂತ್ರಗಳು, ಸರ್ವರ ಒಳಿತು ಹಿತಕ್ಕೆ ಮಾರಕವಾಗಬಲ್ಲ ಸಂಗತಿಗಳು ಹಾಗೂ ಪಿತೂರಿಗಳು ಸಹಾ ಬೆಳಕಿಗೆ ಬರುತ್ತದೆ.” ಎಂದರು.
ತಮ್ಮ ಭಾಷಣದ ಮುಕ್ತಾಯದಲ್ಲಿ ಪೆÇೀಪ್ ಫ್ರಾನ್ಸಿಸ್ ಈ ಸಭೆಗಾಗಿ, ಮಾನವ ಜೀವ ಹಾಗೂ ಭವಿಷ್ಯವನ್ನು ನಂಬುವ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿದರು.
ಕೊನೆಯದಾಗಿ ಅವರು “ಒಮ್ಮೊಮ್ಮೆ ನಾವು ಮರುಭೂಮಿಯಲ್ಲಿ ಕೂಗುತ್ತಿರುವಂತೆ ಹಾಗೂ ಬೃಹತ್ತ್ ಗಾಳಿಯಂತ್ರಗಳ ಎದುರು ಹೋರಾಡುತ್ತಿರುವಂತೆ ಅನಿಸುತ್ತದೆ. ಆದರೆ ಮುನ್ನುಗ್ಗಿರಿ, ಧೈರ್ಯಗೆಡಬೇಡಿ, ಏಕೆಂದರೆ ಒಳ್ಳೆಯದರ ಬಗ್ಗೆ ಕನಸು ಕಾಣುವುದು ಹಾಗೂ ಭವಿಷ್ಯವನ್ನು ರೂಪಿಸುವುದು ಒಳ್ಳೆಯದು. ಜನನಗಳಿಲ್ಲದೆ ಭವಿಷ್ಯವಿಲ್ಲ” ಎಂದರು.
14 ಮೇ 2021, 10:40
Comments