![](https://static.wixstatic.com/media/82588d_9dfba789c13941fb93de1ce0a15e2c91~mv2.png/v1/fill/w_980,h_635,al_c,q_90,usm_0.66_1.00_0.01,enc_auto/82588d_9dfba789c13941fb93de1ce0a15e2c91~mv2.png)
ವಿಶ್ವಗುರು ಫ್ರಾನ್ಸಿಸ್ ತಮ್ಮ ಪ್ರಾರ್ಥನೆಯ ಅಂತಿಮದ ಉಪದೇಶದಲ್ಲಿ ನಮ್ಮ ದೈನಂದಿನ ಜೀವನದಲ್ಲಿ ನಿರಂತರ ಪ್ರಾರ್ಥನೆ, ನಂಬಿಕೆ ಯಾವ ರೀತಿಯ ಸಂಬಂಧವನ್ನು ಬೆಳೆಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸಿದರು.
ವರದಿ: ಕ್ರಿಸ್ಟಫರ್ ವೆಲ್ಸ್
೨೦೨೦ ಮೇ ತಿಂಗಳ ಆರಂಭದಿಂದಲೇ- ಅಂದರೆ ಒಂದು ವರ್ಷದ ಹಿಂದೆಯೇ- "ಪ್ರಾರ್ಥನೆ"ಯನ್ನು ನಮ್ಮ ಜೀವನದಲ್ಲಿ ಹೇಗೆ ನಾವು ಅಳವಡಿಸಿಕೊಳ್ಳುವ ಒಂದು ಪರಿಪಾಠವನ್ನು ಪ್ರೇಕ್ಷಕರಿಗೆ( ತನ್ನ ಜನರಿಗೆ) ವಾರದ ಪ್ರಾರ್ಥನೆಗಳಲ್ಲಿ ತಿಳಿಯಪಡಿಸಿದ್ದರು.
ಪವಿತ್ರ ತಂದೆಯು ಬುಧವಾರ ನಡೆದ ತಮ್ಮ ಕೊನೆಯ ಚರ್ಚೆಯಲ್ಲಿ ಹೇಳಿದ ವಿಷಯದ ಬಗ್ಗೆ " ಪ್ರಾರ್ಥನೆಯ ಪರಿಶ್ರಮವನ್ನು" ಪ್ರತಿಬಿಂಬಿಸುತ್ತಾ ಮತ್ತು "ನಿರಂತರವಾಗಿ ಮಾಡುವ ಪ್ರಾರ್ಥನೆ"ಅರ್ಥವೇನೆಂದರೆ ಇದು ನಮ್ಮನ್ನು ಬೈಬಲ್ ಶ್ರೀ ಗ್ರಂಥವನ್ನು ಓದಲು ಕರೆಯನ್ನು ಮತ್ತು ಆದೇಶವನ್ನುನೀಡುತ್ತದೆ ಎಂಬುದನ್ನು ಸಂತ ಪೌಲರು ಥೆಸಲೋನಿಕರಿಗೆ ಬರೆದ ಮೊದಲ ಪತ್ರದಿಂದ ಆರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಕರೆಯು , ೧೯ ಶತಮಾನದಲ್ಲಿ ಪುಣ್ಯಕ್ಷೇತ್ರಕ್ಕೆ ಧಾವಿಸಿ ಬಂದ ತಪಸ್ವಿಗಳಿಗೆ, ರಷ್ಯಾದ ಯಾತ್ರಿಕರಿಗೆ ಸ್ಪೂರ್ತಿಯನ್ನು ನೀಡಿತು. ಆಗ ಆ ಯಾತ್ರಿಕರು ಯೇಸುವಿನ ಪ್ರಾರ್ಥನೆಯನ್ನು ಕಲಿತು, ಕಾಲಕ್ರಮೇಣ ಸ್ವಲ್ಪ ಸ್ವಲ್ಪವಾಗಿ ಆ ಪ್ರಾರ್ಥನೆಯನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡರು. ತದನಂತರ ಆ ಪ್ರಾರ್ಥನೆಯನ್ನೇ ತಮ್ಮ ಜೀವನದ ಪರಿಯಂತ ಉಸಿರನ್ನಾಗಿಸಿಕೊಂಡರು ಎಂಬ ಅಂಶವನ್ನು
ವಿಶ್ವಗುರು ಪ್ರಾನ್ಸಿಸ್ ನೆನಪಿಸಿಕೊಂಡರು.
ಪ್ರಾರ್ಥನೆ: ನಮ್ಮ ಹೃದಯದಲ್ಲಿ ಉರಿಯುತ್ತಿರುವ ಪವಿತ್ರ ಜ್ವಾಲೆ
ತದನಂತರ ವಿಶ್ವಗುರು ರವರು ಕಥೋಲಿಕ ಚರ್ಚ್ ಗಳಲ್ಲಿ ಉಲ್ಲೇಖಿಸುವ ಆಧ್ಯಾತ್ಮಿಕ ಬೈಬಲ್ ಶ್ರೀ ಗ್ರಂಥದ ಸಾಮಿತಿಗಳ ಇತಿಹಾಸವನ್ನು ಕೆದಕುತ್ತಾ, " ಕ್ರೈಸ್ತರ ಬದುಕಿನಲ್ಲಿ ಪ್ರಾರ್ಥನೆಯು ಉತ್ಸುಕತೆಯನ್ನು ಮೂಡಿಸುತ್ತದೆ" ಅದು ಎಂದಿಗೂ ನಮ್ಮಲ್ಲಿ ಕುಗ್ಗಬಾರದು. ಎಂಬುದನ್ನು ನೆನಪಿಸುತ್ತದೆ. ಹಾಗೆಯೇ" ಇದು ಪ್ರಾಚೀನ ದೇವಾಲಯಗಳಲ್ಲಿ ಇರಿಸಿರುವ ಪವಿತ್ರ ಬೆಂಕಿಯಂತೆ" ಎಂದಿಗೂ ವಿಫಲವಾಗಬಾರದು, ಆದ್ದರಿಂದ, "ಅಂಥಹ ಪವಿತ್ರ ಜ್ವಾಲೆಯು ನಮ್ಮಲ್ಲಿಯೂ ಇರಬೇಕು, ಅದು ನಿರಂತರವಾಗಿ ಉರಿಯುತ್ತಿರಬೇಕು ಎಂದಿಗೂ ನಂದಿಹೋಗಬಾರದು " ಎಂದು ಪವಿತ್ರ ತಂದೆಯು ವಿವರಿಸಿದರು. ಪ್ರಾರ್ಥನೆಯು ನಮ್ಮ ಬದುಕಿನ ಎಲ್ಲಾ ಚಟುವಟಿಕೆಗಳ ಒಂದು ಅವಿಭಾಜ್ಯ ಕ್ರಿಯೆಯಾಗಿದೆ, ತಮ್ಮ ಮಾತುಗಳನ್ನು ಮುಂದುವರಿಸುತ್ತಾ ನಮ್ಮ ದೈನಂದಿನ ಜೀವನದ ಕರ್ತವ್ಯಗಳಿಗೆ ಪ್ರಾರ್ಥನೆಯು ಎಂದೂ ಅಡ್ಡಿಯಾಗುವುದಿಲ್ಲ, ಆದರೆ ಪ್ರಾರ್ಥನೆ ನಮ್ಮ ಬಾಳಿಗೆ ಅರ್ಥವನ್ನು ಮತ್ತು ಶಾಂತಿಯನ್ನು ನೀಡುತ್ತದೆ ಎಂದು ವಿಶ್ವಗುರು ಸಂತ ಜಾನ್ ಕ್ರಿಸೋಸ್ಟೋಮ್ ರವರಿಂದ ತೋರಿಸಿಕೊಟ್ಟರು.
ಕೆಲಸ ಮತ್ತು ಪ್ರಾರ್ಥನೆಯ ನಡುವಿನ ಆಂತರಿಕ ಸಮತೋಲನ
ಆದರೆ ನಿರಂತರ ಪ್ರಾರ್ಥನೆ ಮಾಡುವುದು ಅಷ್ಟೊಂದು ಸುಲಭದ ವಿಷಯವಲ್ಲ ಎಂಬುದನ್ನು ವಿಶ್ವಗುರು ಪ್ರಾನ್ಸಿಸ್ರವರು ಒಪ್ಪಿಕೊಳ್ಳುತ್ತಾರೆ. ನಾವು ನಮ್ಮ ದೈನಂದಿನ ಜೀವನದ ಕಟ್ಟುಪಾಡುಗಳಲ್ಲಿ (ಜಂಜಾಟಗಳಲ್ಲಿ) ಸಿಲುಕಿಕೊಂಡಾಗ , ದೇವರ ಬಗ್ಗೆ ಯೋಚಿಸುವುದು ಕಷ್ಟಸಾಧ್ಯ. ಆದರೆ ನಾವು ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅದೇನೆಂದರೆ ಸೃಷ್ಟಿಯ ಪ್ರತಿಯೊಂದು ಅಂಶಗಳಲ್ಲಿ ದೇವರು ಕಾಳಜಿ ವಹಿಸುತ್ತಾರೆ, ಮಾತ್ರವಲ್ಲ ಆತನು ಪ್ರತಿಯೊಬ್ಬರನ್ನೂ ವೈಯಕ್ತಿಕವಾಗಿ ನೆನಪಿಸಿಕೊಳ್ಳುತ್ತಾನೆ, " ಹಾಗಾಗಿ ನಾವು ಸಹ ಯಾವಾಗಲೂ ಅವರನ್ನು ಸ್ಮರಿಸಬೇಕು," ಎಂದು ವಿಶ್ವಗುರು ತಿಳಿಸಿದರು.
ವಿಶ್ವಗುರು ಫ್ರಾನ್ಸಿಸ್ ಸನ್ಯಾಸಿಗಳನ್ನು ಉದಾಹರಣೆಯಾಗಿಟ್ಟು ಕೊಳ್ಳುತ್ತಾ
ಕೆಲಸ ಮತ್ತು ಪ್ರಾರ್ಥನೆಯ " ಆಂತರಿಕ ಸಮತೋಲನ" ದ ಮಹತ್ತ್ವದ ಬಗ್ಗೆ ತಿಳಿಯಪಡಿಸುತ್ತಾರೆ. ಕೆಲಸವನ್ನು ನಾವು ಆಧಾರವಾಗಿಟ್ಟುಕೊಳ್ಳುವುದರಿಂದ, ತುಂಬಾ ಅಮೂರ್ತವಾದ ಪ್ರಾರ್ಥನೆಯು ವಾಸ್ತವದೊಂದಿಗೆ ಸಂಪರ್ಕವನ್ನು ಕಳೆದುಕೊಳ್ಳಬಹುದು. ಪ್ರಾರ್ಥನೆಯಲ್ಲಿ ಕೈಜೋಡಿಸಿರುವ ಸನ್ಯಾಸಿಗಳು ತಮ್ಮ ದೈಹಿಕ ಶ್ಯಕ್ತಿಯನ್ನು ಕಳೆದುಕೊಳ್ಳುತ್ತಾರೆ (ನಿಶಕ್ತರಾಗುತ್ತಾರೆ) ಎಂದು ತಿಳಿಸಿದರು.
ಮತ್ತೊಂದೆಡೆ ನೋಡುವುದಾದರೆ, ಪ್ರಾರ್ಥನೆಯು ನಮ್ಮ ಕೆಲಸವನ್ನು ಪೂರ್ಣಗೊಳಿಸುತ್ತದೆ. ಪ್ರಾರ್ಥನೆಯು ನಾವು ಮಾಡುವ ಎಲ್ಲಾ ಕಾರ್ಯಗಳ "ಉಸಿರಾಗಿದೆ", ಪ್ರಾರ್ಥನೆಯು" ನಮ್ಮ ಕೆಲಸ ಕಾರ್ಯಗಳಿಗೆ ಆಧಾರಸ್ತಂಭವಾಗಿದೆ" ಎಂಬುದನ್ನು ಮರೆಯುವಂತಿಲ್ಲ. ಅದು ಸ್ಪಷ್ಟವಾಗಿ ಕಾಣದಿದ್ದರೂ ಸಹ " ಅದು ಅಮಾನವೀಯವಾಗಿದೆ" ಹಾಗಾಗಿ ಕೆಲಸದಲ್ಲಿ ಲೀನವಾಗುವುದರ ಜೊತೆಗೆ ನಾವು ಇನ್ನು ಮುಂದೆ ಹೆಚ್ಚು ಪ್ರಾರ್ಥನೆಗೆ ಸಮಯವನ್ನು ನಿಗಧಿಪಡಿಸಲು ಮುಂದಾಗೋಣ ಎಂದು ವಿಶ್ವಗುರು ತಿಳಿಸಿದರು.
ಪ್ರಾರ್ಥನೆಯ ಜ್ವಾಲೆಯನ್ನು ಜೀವಂತವಾಗಿರಿಸುವುದು.
ಅಂತಿಮವಾಗಿ, ಯೇಸುವಿನ ರೂಪಾಂತರದ ಅನುಭವಗಳ ಬಗ್ಗೆ ವಿಶ್ವಗುರು ಫ್ರಾನ್ಸಿಸ್ ನೆನಪಿಸಿಕೊಳ್ಳುತ್ತಾ, ಯೇಸು ಭಾವಪರವಶ ಚಿಂತನೆಯ ಕ್ಷಣಗಳನ್ನು ಹೆಚ್ಚಿಸಲ್ಲಿಲ್ಲ, ಬದಲಾಗಿ ಶಿಷ್ಯರೊಂದಿಗೆ ತಮ್ಮ ದೈನಂದಿನ ಪ್ರಯಾಣವನ್ನು ಪುನರಾಂಭಿಸಲು ತಿಳಿಸಿದರು. ಹಾಗೆಯೇ ತಾಬೋರ್ ಬೆಟ್ಟವು" ಇದು ಅವರ ಹೃದಯವನ್ನು ಬೆಳಗುವ ಕಿರಣದಂತೆಯೂ ಮತ್ತು ಅವರ ನಂಬಿಕೆಯ ಶಕ್ತಿಯಾಗಿದೆ" ಎಂದು ನೆನಪಿಸಿದರು.
ನಂಬಿಕೆ, ಜೀವನ ಮತ್ತು ಪ್ರಾರ್ಥನೆಯ ನಡುವಿನ ಸಂಬಂಧಗಳ ಬಗ್ಗೆ ವಿಶ್ವಗುರು ವಿವರಿಸುತ್ತಾ, " ಕ್ರೈಸ್ತರಾಗಿ ಬಾಳನ್ನು ನಡೆಸುತ್ತಿರುವ ನಾವುಗಳು ನಮ್ಮ ಜೀವನದಲ್ಲಿ ಈ ಪವಿತ್ರಜ್ವಾಲೆಯನ್ನು ಉರಿಯುತ್ತಿರುವಂತೆ ನೋಡಿಕೊಳ್ಳಬೇಕು. ದೇವರು ಇದನ್ನು ಪ್ರತಿಯೊಬ್ಬರಿಂದಲೂ ನಿರೀಕ್ಷಿಸುತ್ತಾರೆ" ಎಂದು ಸ್ಪಷ್ಟಪಡಿಸಿದರು.
೦೯ ಜೂನ್ ೨೦೨೧, ೮:೪೯
ಕನ್ನಡಕ್ಕೆ: ಗಾಯತ್ರಿ
Comments