ಬರ್ಕಿನ ಫಾಸೊದಲ್ಲಿ ನಡೆದ ಮತ್ತೊಂದು ದಾಳಿಗೆ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಕ್ಕೆ ದುಃಖವನ್ನು ವ್ಯಕ್ತಪಡಿಸುತ್ತಾ ಪವಿತ್ರ ನಗರ ಹಾಗೂ ಮಾಯನ್ಮಾರ್ ಗಾಗಿ ಪ್ರಾರ್ಥಿಸಲು ವಿಶ್ವಗುರುಗಳು ಕರೆ ನೀಡಿದರು.
ವರದಿ: ಲಿಂಡಾ ಬೊರ್ದೊನಿ
ಭಾನುವಾರ ಪ್ರಾರ್ಥನಾ ವಿಧಿ ಸಮಯದಲ್ಲಿ ಪಶ್ಚಿಮ ಆಫ್ರಿಕಾದ ರಾಷ್ಟ್ರದ ಸಣ್ಣ ಪಟ್ಟಣವಾದ ಬರ್ಕಿನಫಾಸೊವಿನ ಮೇಲೆ ಶುಕ್ರವಾರ ಮತ್ತು ಶನಿವಾರ ನಡುವೆ ನಡೆದ ಹತ್ಯಾಕಾಂಡಕ್ಕೆ ಈಡಾದ ಸಂತ್ರಸ್ತರಿಗಾಗಿ ವಿಶ್ವಗುರುಗಳು ವಿಶೇಷವಾಗಿ ಪ್ರಾರ್ಥಿಸಿದರು.
“ಈ ರೀತಿಯ ಪುನರಾವರ್ತಿತ ಹಿಂಸಾಚಾರ ದಾಳಿಗೆ ತುತ್ತಾಗಿ ಬಳಲುತ್ತಿರುವವರ ಕುಟುಂಬಗಳಿಗೆ ಮತ್ತು ಬರ್ಕಿನಾದ ಜನರಿಗೆ ಹತ್ತಿರವಾಗಿದ್ದೇವೆ ಆಫ್ರಿಕಾ ದೇಶಕ್ಕೆ ಶಾಂತಿ ಬೇಕು ಹಿಂಸಾಚಾರವಲ್ಲ” ಎಂದರು.
ದೇವದೂತನ ಸಂದೇಶ ತ್ರಿಕಾಲ ಪ್ರಾರ್ಥನೆಗಾಗಿ ನೆರೆದಿದ್ದ ಭಕ್ತ ವಿಶ್ವಾಸಗಳನ್ನು ಉದ್ದೇಶಿಸಿ ಮಾತನಾಡುತ್ತಾ ಯಗ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ 7 ಮಕ್ಕಳು ಸೇರಿದಂತೆ ಕನಿಷ್ಠ 132 ಮಂದಿ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದರು.
ಈ ರೀತಿಯ ದಾಳಿ ಇತ್ತೀಚಿನ ವರ್ಷಗಳಲ್ಲಿ ಬರ್ಕಿನ ಫಾಸೊದ ಮೇಲೆ ನಡೆದಿರುವ ಅತ್ಯಂತ ಭೀಕರ ಉಗ್ರಗಾಮಿ ದಾಳಿ ಎಂದು ಬಣ್ಣಿಸಿದ ಸರ್ಕಾರ, 72 ಗಂಟೆಗಳ ಕಾಲ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ. ಭಯೋತ್ಪಾದಕರು ಎಂದು ಬಣ್ಣಿಸಿದರು ಸಹ ಯಾವುದೇ ಗುಂಪು ಇದರ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ ಇನ್ನೂ 40 ನಿವಾಸಿಗಳು ಗಾಯಗೊಂಡಿದ್ದಾರೆಂದು ವರದಿಯಾಗಿದೆ
ನೈಜರ್ ಗಡಿಯ ಸಮೀಪವಿರುವ ಜಿಹಾದಿ ಪೀಡಿತ ಈಶಾನ್ಯದಲ್ಲಿರುವ ಸೋಲ್ಹಾನ್ ಗ್ರಾಮಕ್ಕೆ ಸಶಸ್ತ್ರ ದಾಳಿಕೋರರು ರಾತ್ರೋರಾತ್ರಿ ಮುತ್ತಿಗೆ ಹಾಕುವುದರ ಜೊತೆಗೆ ಅವರ ಮನೆಗಳನ್ನು ಮತ್ತು ಮಾರುಕಟ್ಟೆಯನ್ನು ಸಹ ಸುಟ್ಟುಹಾಕಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿರಾರು ಮಂದಿ ಯು.ಎನ್ ಶಾಂತಿ ಪಾಲಕರು ಇದ್ದರೂ ಸಹ ಪಶ್ಚಿಮ ಆಫ್ರಿಕಾದ ಸಾಹೆಲ್ ಪ್ರದೇಶದಲ್ಲಿ ಆಲ್-ಖೈದಾ ಮತ್ತು ಇಸ್ಲಾಮಿಕ್ ರಾಜ್ಯಕ್ಕೆ ಸಂಬಂಧಿಸಿರುವ ಜಿಹಾದಿಗಳ ದಾಳಿಗಳು ವರ್ಷದ ಆರಂಭದಿಂದಲೂ ತ್ವರಿತ ಹಾಗೂ ತೀವ್ರವಾಗಿ ಹೆಚ್ಚಾಗಿವೆ, ವಿಶೇಷವಾಗಿ ಬರ್ಕಿನ ಫಾಸೊಮಾಲಿ ಮತ್ತು ನೈಜರ್ ನಲ್ಲಿ ನಾಗರಿಕರು ತೀವ್ರ ತೊಂದರೆಯನ್ನು ಅನುಭವಿಸಿದ್ದಾರೆ ಈ ರೀತಿಯ ಹಿಂಸಾಚಾರದಿಂದ ನಲುಗಿ ಹೋಗಿರುವ ನಾಗರಿಕರು ಕೇವಲ ಎರಡು ವರ್ಷಗಳಲ್ಲಿ 1.14 ದಶಲಕ್ಷ ಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ ಉತ್ಸಾಹ ಕಳೆದುಕೊಂಡು ಆರ್ಥಿಕವಾಗಿ ಕುಗ್ಗಿ ಹೋಗಿರುವ ಬಡ, ಶುಷ್ಕ ದೇಶವು ನೆರೆಯ ಪಟ್ಟಣ ಮಾಲಿಯಿಂದ ಸುಮಾರು 20,000 ನಿರಾಶ್ರಿತರಿಗೆ ಆತಿಥ್ಯ ವಹಿಸುತ್ತಿದೆ.
ಪವಿತ್ರ ನಗರ ಮತ್ತು ಮ್ಯಾನ್ಮಾರ್ ನಲ್ಲಿ 'ಶಾಂತಿಗಾಗಿ ಒಂದು ನಿಮಿಷ'
ಜೂನ್ 8 ಮಂಗಳವಾರ ಮಧ್ಯಾಹ್ನ 1:00 ಗಂಟೆಗೆ ಅಂತರರಾಷ್ಟ್ರೀಯ ಕಥೋಲಿಕ ಕ್ರಿಯಾ ಸಂಘವು (International catholic action associations)
ಪ್ರತಿಯೊಬ್ಬರನ್ನು ತಮ್ಮ ಧಾರ್ಮಿಕ ಸಂಪ್ರದಾಯದ ಪ್ರಕಾರ ಶಾಂತಿಗಾಗಿ ಒಂದು ನಿಮಿಷವನ್ನು ಮೀಸಲಿಡಲು ಆಹ್ವಾನಿಸುತ್ತಿದೆ ಎಂದು ವಿಶ್ವಗುರು ಫ್ರಾನ್ಸಿಸ್ ರವರು ನೆರೆದಿದ್ದ ಭಕ್ತ ವಿಶ್ವಾಸಿಗಳಿಗೆ ತಿಳಿಸಿದರು ಅತಿಮುಖ್ಯವಾಗಿ ಪವಿತ್ರ ನಗರ ಹಾಗೂ ಮಯನ್ಮಾರ್ ಗಾಗಿ ವಿಶೇಷ ಪ್ರಾರ್ಥನೆ ಕೋರಿದರು.
ಜೂನ್ ೦೬, ೨೦೨೧, ೧೨:೫೮
ಕನ್ನಡಕ್ಕೆ: ಮೇರಿ ಲತಾ
Comments