![](https://static.wixstatic.com/media/82588d_8f39fc26f91b4a43a2022eae98d1826a~mv2.jpeg/v1/fill/w_750,h_422,al_c,q_80,enc_auto/82588d_8f39fc26f91b4a43a2022eae98d1826a~mv2.jpeg)
ಜಗತಿನಾದ್ಯಾಂತ ಬಾಲ ಕಾರ್ಮಿಕರ ಸಂಖ್ಯೆಯು ಕಳೆದ ಎರಡು ದಶಕಗಳಲ್ಲಿ 160 ದಶಲಕ್ಷಕ್ಕೆ ಏರಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಈ ಬಾಲಕಾರ್ಮಿಕರ ಪದ್ಧತಿಯಿಂದ 8.4 ದಶಲಕ್ಷ ಮಕ್ಕಳು ನರಳುತ್ತಿದ್ದಾರೆ. ಜೊತೆಗೆ ಕಳೆದ ವರ್ಷದಿಂದ ವಿಶ್ವದೆಲ್ಲೆಡೆ ಹರಡಿ ಹಬ್ಬುತ್ತಿರುವ ಕೋವಿಡ್-19ನಿಂದಾಗಿ
ಈ ಬಾಲಕಾರ್ಮಿಕ ಪದ್ಧತಿಯ ಸುಳಿಗೆ ಇನ್ನೂ ಲಕ್ಷಾಂತರ ಮಕ್ಕಳು ಬಲಿಯಾಗುವ ಆತಂಕ ಎದುರಾಗಿದೆ. ಯುನೈಟೆಡ್ ನೇಷನ್ಸ್ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು (ಐ.ಎಲ್.ಓ) ಮತ್ತು ಯು.ಎನ್. ಮಕ್ಕಳ ನಿಧಿ ಯುನೆಸೆಫ್ ಜಂಟಿ ವರದಿಯಲ್ಲಿ ಜೂನ್ 12 ಶನಿವಾರ ಬಾಲ ಕಾರ್ಮಿಕ ವಿರುದ್ಧದ ವಿಶ್ವ ದಿನಾಚರಣೆ ದೃಷ್ಟಿಯಿಂದ ಅದರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ.
"ಬಾಲಕಾರ್ಮಿಕ ಜಾಗತಿಕ ಅಂದಾಜುಗಳು 2020 ಪ್ರವೃತ್ತಿಗಳು ಮತ್ತು ಮುಂದಿನ ಹಾದಿ" ಎನ್ನುವ ಹೊಸ ವರದಿಯಲ್ಲಿ ಈ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸುವ ಕಾರ್ಯವು ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನಿಂತು ಹೋಗಿದೆ ಎಂದು 2 ಏಜೆನ್ಸಿಗಳು ಎಚ್ಚರಿಸಿದ್ದು ಬಾಲಕಾರ್ಮಿಕ ಸಂಖ್ಯೆಯು 2016ರಿಂದ 2020ರ ನಡುವೆ 94 ಮಿಲಿಯನ್ ತಲುಪಿದೆ.
ಐ.ಎಲ್.ಓ.ಎಚ್ಚರಿಕೆಯ ಕರೆಗಂಟೆ
"ಈ ಹೊಸ ರೀತಿಯ ಅಂದಾಜುಗಳು ಇಡೀ ವಿಶ್ವಕ್ಕೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಈಗಿನ ತಲೆಮಾರಿನ ಮಕ್ಕಳು ಅಪಾಯಕ್ಕೆ ಸಿಲುಕುತ್ತಿರುವಾಗ ನಾವು ನೋಡಿಕೊಂಡು ಸುಮ್ಮನೆ ನಿಲ್ಲಲು ಸಾಧ್ಯವಿಲ್ಲ" ಎಂದು ಐ.ಎಲ್.ಓ. ಮಹಾನಿರ್ದೇಶಕರಾದ ಗೈ ರೈಡರ್ ಹೇಳಿದರು.ಈ ಆರ್ಥಿಕ ಸಂಕಷ್ಟದ ನಡುವೆಯೂ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಅವರಿಗೆ ಸಾಮಾಜಿಕ ರಕ್ಷಣೆಯ ಅವಕಾಶ ನೀಡಬೇಕಾಗಿದೆ ಎಂದು ಅವರು ಗಮನ ಸೆಳೆದರು. ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಹೂಡುವುದು ಕೃಷಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವುದು ಅತ್ಯಗತ್ಯ.
ಈ ವಿಚಾರದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದರ ಮೇಲೆ ಬಡತನ ಮತ್ತು ಬಾಲಕಾರ್ಮಿಕ ಪದ್ಧತಿಯ ಚಕ್ರವನ್ನು ಮುರಿಯಲು ಸಾಧ್ಯ ಎಂದು ರೈಡರ್ ಹೇಳಿದರು.
ಯುನಿಸೆಫ್: ಮತ್ತೆ ಸರಿದಾರಿಗೆ ಬರಲು ಇದು ಸಮಯ
ಯುನಿಸೆಫ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆನ್ರಿಯೆಟಾ ಪೋರ್ ರವರು "ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗೊಳಿಸುವ ಹೋರಾಟದಲ್ಲಿ ಜಗತ್ತು ಸೋಲುತ್ತಿದೆ" ಎಂದು ಎಚ್ಚರಿಸಿದ್ದಾರೆ.
ಕೋವಿಡ್-19ನಿಂದಾಗಿ ಸಾಂಕ್ರಮಿಕ ರೋಗ ಬರುವುದಕ್ಕೆ ಮುಂಚೆಯೇ ಕಳೆದ ಇಪ್ಪತ್ತು ವರ್ಷಗಳಲ್ಲಿ ನಾವು ಬಾಲಕಾರ್ಮಿಕರ ಸಂಖ್ಯೆಯ ಹೆಚ್ಚಳವನ್ನು ಕಂಡಿದ್ದೇವೆ. 2016ರಿಂದ 8.4 ಮಿಲಿಯನ್ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎಂದು ಅವರು ಶನಿವಾರ ಬಾಲಕಾರ್ಮಿಕರ ವಿರುದ್ಧ ವಿಶ್ವ ದಿನಾಚರಣೆಯಲ್ಲಿ ವಿಡಿಯೋ ಸಂದೇಶಗದಲ್ಲಿ ಅವರು ತಿಳಿಸಿದ್ದಾರೆ.
ಕೋವಿಡ್ -19 ನಿಂದಾಗಿ ಶಾಲೆಗಳು ಮುಚ್ಚಿರುವುದು ಉದರ ಪೋಷಣೆಗೆ ಬೇರೆ ದಾರಿ ಕಾಣದೆ ಸಾವಿರಾರು ಕುಟುಂಬಗಳು ಹತಾಶರಾಗಿ ಪೋಷಕರು ಮಕ್ಕಳನ್ನು ದುಡಿಯಲು ತಳ್ಳುತ್ತಿದ್ದಾರೆ, ಈಗಿರುವ ಲಾಕ್ ಡೌನ್ ಗಳು ಶಾಲೆಗಳ ಮುಚ್ಚುವಿಕೆ, ಆರ್ಥಿಕ ಸಂಕಷ್ಟ ಇವೆಲ್ಲವೂ ಜನರನ್ನು ಈ ರೀತಿಯ ಹೃದಯವಿದ್ರಾವಕ ಆಯ್ಕೆಗಳನ್ನು ಮಾಡಿಕೊಳ್ಳಲು ಕಾರಣಗಳಾಗಿವೆ ಎಂದು ಪೋರ್ ರವರು ಹೇಳಿದರು. ಈ ಸಮಯ ಮತ್ತೆ ನಾವು ಸರಿದಾರಿಗೆ ಬರುವ ಸಮಯವಾಗಿದೆ, ಮಕ್ಕಳನ್ನು ಮತ್ತೆ ಅವರು ಸೇರಿದ್ದ ಶಾಲೆಗೆ ಮರಳಿ ಸೇರಿಸಲು, ಆದಾಯ ಹೆಚ್ಚಿಸುವ ಕ್ರಮಗಳನ್ನು ವಿಸ್ತರಿಸಲು, ಅವರು ಎಲ್ಲಾ ದೇಶಗಳಿಗೂ ಕರೆನೀಡಿದ್ದಾರೆ ಮಕ್ಕಳನ್ನು ಉದ್ಯೋಗಗಳಿಂದ ಬಿಡಿಸಿ ಅವರು ಮತ್ತೆ ಶಾಲೆಗೆ ಮರಳಲು ಮತ್ತು ಸಾಮಾಜಿಕ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಹೂಡಿಕೆಗಳಿಗೆ ಆದ್ಯತೆ ನೀಡುವಂತೆ ಸರ್ಕಾರಗಳನ್ನು ಮತ್ತು ಅಂತರರಾಷ್ಟ್ರೀಯ ಅಭಿವೃದ್ಧಿ ಬ್ಯಾಂಕ್ ಗಳನ್ನು ನಾವು ಕೋರುತ್ತೇವೆ ಎಂದು ಪೋರ್ ರವರು ಹೇಳಿದ್ದಾರೆ.
ಕೋವಿಡ್ -19ನ ಬೆಳವಣಿಗೆ
2016ರಿಂದ ಸ್ವಲ್ಪ ಪ್ರಗತಿಯನ್ನು ಸಾಧಿಸುತ್ತಾ ಬರುತ್ತಿರುವ ಪ್ರದೇಶಗಳು ಹಾಗೂ ಏಷ್ಯಾ-ಪೆಸಿಫಿಕ್, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ನಂತಹ ಪ್ರಬಲ ರಾಷ್ಟ್ರಗಳ ಅಭಿವೃದ್ಧಿಯ ಮೇಲೂ ಈ ಕೋವಿಡ್ 19 ತನ್ನ ಕರಾಳ ಛಾಯೆಯನ್ನು ಅಪಾರವಾಗಿ ಚಾಚಿಕೊಂಡಿದೆ ಎಂದು ಐ.ಎಲ್.ಓ.,ಯುನಿಸೆಫ್ ವರದಿ ಹೇಳುತ್ತದೆ.
ಹಾಗೆಯೇ ಉಪಸಹಾರನ್, ಆಫ್ರಿಕಾದಲ್ಲಿ ಜನಸಂಖ್ಯೆಯ ಹೆಚ್ಚಳ ಪ್ರಕೃತಿ ವಿಕೋಪಗಳು ತೀವ್ರತರವಾದ ಬಡತನ ಮತ್ತು ಸಮರ್ಪಕವಲ್ಲದ ಸುರಕ್ಷತಾ ಕ್ರಮಗಳಿಂದಾಗಿ ಕಳೆದ ನಾಲ್ಕು ವರ್ಷಗಳಲ್ಲಿ 16.6 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಲು ಕಾರಣವಾಗಿದೆ.
ಈಗ ಈ ಸಾಂಕ್ರಮಿಕ ರೋಗದ ಪರಿಣಾಮವಾಗಿ ಜಾಗತಿಕವಾಗಿ 9 ಮಿಲಿಯನ್ ಹೆಚ್ಚುವರಿ ಮಕ್ಕಳು 2022 ರ ಅಂತ್ಯಕ್ಕೆ ಬಾಲಕಾರ್ಮಿಕರಾಗುವ ಅಪಾಯವಿದೆ ಎಂದು ವರದಿ ಎಚ್ಚರಿಸಿದೆ.ನಾವು ಉತ್ತಮವಾದ ಸಾಮಾಜಿಕ-ಆರ್ಥಿಕ ಸುರಕ್ಷಿತಾ ಕ್ರಮಗಳನ್ನು ಹೊಂದದೇ ಹೋದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿ 46 ದಶಲಕ್ಷಕ್ಕೆ ಏರಬಹುದು ಎಂದು ಸಿಮ್ಯುಲೇಶನ್ ಒಂದು ಮಾದರಿ ತೋರಿಸುತ್ತದೆ. ಕೋವಿಡ್-19ನಿಂದ ಉಂಟಾಗಿರುವ ಆರ್ಥಿಕ ಅಘಾತಗಳು, ಶಾಲೆಗಳು ಮುಚ್ಚಿರುವುದರಿಂದ ಮಕ್ಕಳು ತಮ್ಮ ಕುಟುಂಬದ ಪಾಲನೆ ಪೋಷಣೆಗಾಗಿ ದಿನದ ಹೆಚ್ಚಿನ ಸಮಯವನ್ನು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಟ್ಟ ಪರಿಸ್ಥಿತಿಯಲ್ಲಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ,ಜೊತೆಗೆ ಬಾಲಕಾರ್ಮಿಕ ಪದ್ಧತಿಯೊಂದೆ ದಾರಿಯೆಂದು ನಂಬಿದ್ದಾರೆ.
2020ರ ಜಾಗತಿಕ ಅಂದಾಜಿನ ಪ್ರಮುಖ ಫಲಿತಾಂಶಗಳು
ಬಾಲಕಾರ್ಮಿಕರಾಗಿ ದುಡಿಯುತ್ತಿರುವವರಲ್ಲಿ ಬಾಲಕಿಯರಿಗಿಂತ ಬಾಲಕರೆ ಹೆಚ್ಚು.ಬಾಲಕರಲ್ಲಿ ಶೇಕಡಾ 11.2 ರಷ್ಟು ಬಾಲಕಾರ್ಮಿಕರಿದ್ದರೆ ಬಾಲಕಿಯರಲ್ಲಿ ಶೇಕಡಾ 7.8ರಷ್ಟಿದ್ದಾರೆ. ಬಾಲಕಾರ್ಮಿಕ ಪದ್ದತಿಯು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಹೆಚ್ಚು ಕಂಡುಬರುತ್ತದೆ. ಬಾಲಕಾರ್ಮಿಕ ಪದ್ಧತಿ ಯಲ್ಲಿ 37.3 ಮಿಲಿಯನ್ ನಗರ ಮಕ್ಕಳಿಗೆ ಹೋಲಿಸಿದರೆ 122.7 ಮಿಲಿಯನ್ ಗ್ರಾಮೀಣ ಪ್ರದೇಶದ ಮಕ್ಕಳಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಬಾಲಕಾರ್ಮಿಕರ(ಶೇ 13.9) ನಗರ ಪ್ರದೇಶಗಳಿಗಿಂತ (ಶೇ 4.7)ಇದು ಮೂರು ಪಟ್ಟು ಹೆಚ್ಚಾಗಿದೆ ಹೆಚ್ಚಿನ ಬಾಲಕಾರ್ಮಿಕರು ಕೃಷಿ ಕಾರ್ಯದಲ್ಲಿ ಕಂಡುಬರುತ್ತಾರೆ.ಶೇ70 ಕಿಂತ ಹೆಚ್ಚು ಮಕ್ಕಳು ಒಟ್ಟು 112 ದಶಲಕ್ಷ ಮಕ್ಕಳು ಈ ಕೃಷಿಗೆ ಸಂಬಂಧಪಟ್ಟ ಕಾರ್ಯಗಳಲ್ಲಿ ದುಡಿಯುತ್ತಿದ್ದಾರೆ.
ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದರೊಂದಿಗೆ ಬಾಲಕಾರ್ಮಿಕ ಪದ್ಧತಿ ಹೆಚ್ಚಾಗಲು ಕಾರಣವಾಗಿದೆ . ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಯಲ್ಲಿದ್ದರೂ ಕಿರಿಯ ಮಕ್ಕಳೇ ಹೆಚ್ಚಾಗಿ ಶಾಲೆಯಿಂದ ಹೊರಗುಳಿದಿದ್ದಾರೆ.5 ರಿಂದ 11 ವರ್ಷ ವಯಸ್ಸಿನ ಮಕ್ಕಳಲ್ಲಿ ನಾಲ್ಕನೇ ಒಂದು ಭಾಗಕ್ಕಿಂತಲೂ ಹೆಚ್ಚು ಮತ್ತು 12 ರಿಂದ 14 ವಯಸ್ಸಿನ ಮಕ್ಕಳಲ್ಲಿ ಮೂರನೆಯ ಒಂದು ಭಾಗದಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.
ಬಾಲಕಾರ್ಮಿಕ ಪದ್ಧತಿಗೆ ಕೊನೆ ಹಾಡಲು ಐ.ಎಲ್.ಒ ಮತ್ತು ಯೂನಿಸೆಫ್ ಕರೆ
*ಸಾರ್ವತ್ರಿಕವಾಗಿ ಎಲ್ಲಾ ಮಕ್ಕಳ ರಕ್ಷಣೆಯನ್ನು ಒಳಗೊಂಡಂತೆ ಮಕ್ಕಳಿಗೆ ಅಗತ್ಯವಾದ ಎಲ್ಲಾ ಅನುಕೂಲಗಳನ್ನು ಮಾಡಿಕೊಡುವುದು.
*ಕೋವಿಡ್-19 ಕ್ಕಿಂತ ಮೊದಲು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಒಳಗೊಂಡಂತೆ ಎಲ್ಲಾ ಮಕ್ಕಳನ್ನು ಶಾಲೆಗೆ ಸೇರಿಸುವುದು ಮತ್ತು ಗುಣಾತ್ಮಕ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ಹೆಚ್ಚಿಸುವುದು.
*ವಯಸ್ಕರಿಗೆ ತಕ್ಕದಾದ ಕೆಲಸ ನೀಡುವುದರಿಂದ ಕುಟುಂಬಗಳು ಆದಾಯಗಳಿಕೆಗಾಗಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ತಪ್ಪಿಸುವುದು.
*ಬಾಲಕಾರ್ಮಿಕರ ಮೇಲೆ ಪ್ರಭಾವ ಬೀರುವ ಹಾನಿಕಾರಕ ಲಿಂಗತಾರತಮ್ಯ ನಿಯಮಗಳಿಗೆ ಅಂತ್ಯ ಹಾಡುವುದು.
*ಮಕ್ಕಳ ರಕ್ಷಣಾ ವ್ಯವಸ್ಥೆಗೆ ಆದ್ಯತೆ ಜೊತೆಗೆ ಆದ್ಯತೆ ನೀಡುವುದು, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಅಭಿವೃದ್ಧಿ, ಗ್ರಾಮೀಣ ಸೇವೆಗಳಿಗೆ ಆದ್ಯತೆ ನೀಡುವುದು.
ಈ ರೀತಿಯ ಕಾರ್ಯಗಳನ್ನು ಮಾಡುವುದರಿಂದ ಇಡೀ ವಿಶ್ವದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಹಂತಹಂತವಾಗಿ ಅಂತ್ಯಗೊಳಿಸಲು ಸಾಧ್ಯವಾಗುತ್ತದೆ ಎಂದು ಐ. ಎಲ್.ಓ. ಮತ್ತು ಯುನಿಸೆಫ್ ಕರೆ ನೀಡುತ್ತಿದೆ.
೦೯ ಜೂನ್ ೨೦೨೧
ಕನ್ನಡಕ್ಕೆ : ಸಹೋ. ವಿನಯ್ ಕುಮಾರ್
Comments