top of page

ಸಂತ ಪದವಿಯ ಹಾದಿಯಲ್ಲಿ ಯೂರೋಪಿನ ಐಕ್ಯತೆಯ ತಂದೆ ರಾಬರ್ಟ್ ಶೂಮೆನ್.

Writer's picture: BangaloreArchdioceseBangaloreArchdiocese

ಜಗದ್ಗುರು ಫ್ರಾನ್ಸಿಸ್ ರವರು ಯೂರೋಪಿನ ಗೌರವಾನ್ವಿತ ರಾಜಕಾರಣಿ ರಾಬರ್ಟ್ ಶೂಮೆನ್ ಮತ್ತು ಎರಡನೆಯ ಮಹಾಯುದ್ಧದ ಕೊನೆಯಲ್ಲಿ ಸೋವಿಯತ್ ಸೈನ್ಯದಿಂದ ಹುತಾತ್ಮರಾದ ಹತ್ತು ಪೋಲ್ಯಾಂಡಿನ ಸನ್ಯಾಸಿಗಳನ್ನು ಸಂತ ಪದವಿಗೆ ಏರಿಸುವ ಕಾರಣಗಳನ್ನ ಕ್ರೋಢಿಕರಿಸಿ ಮುಂದಿಡುವುದಕ್ಕೆ ಅಧಿಕೃತವಾಗಿ ಅನುಮತಿ ನೀಡಿದ್ದಾರೆ. ವೀರ ಸದ್ಗುಣಗಳುಳ್ಳ ಇನ್ನಿತರ ಹಲವಾರು ಸತ್ಪುರುಷರು ಮತ್ತು ಮಹಿಳೆಯರನ್ನೂ ಅಧಿಕೃತವಾಗಿ ಗುರುತಿಸಲಾಯಿತು.


ವ್ಯಾಟಿಕನ್ ಸುದ್ದಿ ಬರಹಗಾರರಿಂದ


ಧರ್ಮಸಭೆಯು ಯೂರೋಪಿನ ಐಕ್ಯತೆಯ ಪಿತಾಮಹರಲ್ಲಿ ಒಬ್ಬರಾದ ರಾಬರ್ಟ್ ಶೂಮೆನ್‌ರವರ ವೀರ ಸದ್ಗುಣಗಳನ್ನ ಗುರುತಿಸಿದೆ, ಆದ್ದರಿಂದ ಅವರನ್ನು "ಪೂಜ್ಯ" ಪದವಿಗೇರಿಸಲಾಗಿದೆ.


"ಸಂತರ ಕಾರಣ" ಎಂಬ ಸಭೆಯ ಮುಖ್ಯಸ್ಥರಿಗೆ ನಡೆದ ಸಮಾರಂಭದಲ್ಲಿ ಕಾರ್ಡಿನಲ್ ಮರ‍್ಸೆಲ್ಲೋ ಸೆಮಿರಾರೋ , ಜಗದ್ಗುರು ಫ್ರಾನ್ಸಿಸ್ ರವರು ರಾಬರ್ಟ್ ಶೂಮೆನ್ ಜೊತೆಗೆ ನಾಲ್ಕು ಇತರ ಪೂಜ್ಯರು ಮತ್ತು ಹನ್ನೊಂದು ಭವಿಷ್ಯದ ಆಶೀರ್ವದಿತರು , ಇವರೊಟ್ಟಿಗೆ ೧೯೪೫ ರಲ್ಲಿ ಸೋವಿಯತ್ ಪಡೆಗಳ ಆಕ್ರಮಣದಿಂದ ಪೋಲ್ಯಾಂಡ್ನಲ್ಲಿ ಓಡಿಯಮ್ ಫಿಡೈ(ವಿಶ್ವಾಸದ ದ್ವೇಶಕ್ಕಾಗಿ) ಕೊಲ್ಲಲ್ಪಟ್ಟ ಕನ್ಯಾಸ್ತ್ರೀ ಹುತಾತ್ಮರನ್ನು ಸಂತ ಪದವಿಗೆ ಏರಿಸುವ ಕಾರಣಗಳನ್ನ ಕ್ರೋಢೀಕರಿಸಿ ಮುಂದಿಡುವುದಕ್ಕೆ ಸಂತರನ್ನು ಘೋಷಿಸುವ ಪ್ರಕ್ರಿಯೆಯ ವ್ಯಾಟಿಕನ್ ವಿಭಾಗೀಯ ಕಚೇರಿಗೆ ಅಧಿಕೃತವಾಗಿ ಅನುಮತಿಸಿದರು.


ಶೂಮೆನ್: ರಾಜಕೀಯ ಧರ್ಮಪ್ರಚಾರಕ್ಕಾಗಿ ಹಾಗೂ ಸೇವೆಗಾಗಿ


ಫ್ರೆಂಚಿನ ಕಥೋಲಿಕರಾಗಿದ್ದ ರಾಬರ್ಟ್ ಶೂಮೆನ್ (೧೮೮೬-೧೯೬೩) ಅವರು ರಾಜಕೀಯಕ್ಕೆ ಬದ್ಧರಾಗಿ -ಧರ್ಮಪ್ರಚಾರ ಹಾಗೂ ಸೇವೆಗೆಂದು ಅರಿತು , ದೇವರ ಚಿತ್ತದ ವಿದೇಯತೆಯ ಕ್ರಿಯೆಯಾಗಿ -ಪ್ರಾರ್ಥನೆಯಲ್ಲಿ ಬಾಳುತ್ತ ಮತ್ತು ದಿನನಿತ್ಯ ಪರಮಪ್ರಸಾದದಲ್ಲಿ ಪೋಷಣೆಗೊಳ್ಳುತ್ತಿದ್ದರು. ಗೆಸ್ಟಪೋರವರು ೧೪ ಸೆಪ್ಟೆಂಬರ್ ೧೯೪೦ ರಿಂದ ೧೨ ಏಪ್ರಿಲ್ ೧೯೪೧ರ ವರೆಗೆ ಅವರನ್ನು ಬಂಧಿಸಿ, ಸೆರೆಮನೆಯಲ್ಲಿಟ್ಟಿದ್ದರು. ಅವರು ಅಲ್ಲಿಂದ ಯಶಸ್ವಿಯಾಗಿ ತಪ್ಪಿಸಿಕೊಳ್ಳುತ್ತ ಯುದ್ಧ ಮುಗಿಯುವವರೆಗೂ ಕಣ್ಮರೆಯಾಗಿ ಜೀವಿಸುತ್ತ ಮುಖ್ಯವಾಗಿ ನಿರಾಶ್ರಿತರನ್ನು ಕಾನ್ವೆಂಟ್ ಗಳಿಗೆ ಹಾಗೂ ಮಠಗಳಿಗೆ ಕರೆತಂದರು. ಯುದ್ಧದ ಅಂತ್ಯದಲ್ಲಿ , ಅವರು ಫ್ರಾನ್ಸನ ಸಂವಿಧಾನ ಸಭೆಗೆ ೧೯೪೫ ಮತ್ತು ೧೯೪೬ರಲ್ಲಿ ಚುನಾಯಿತರಾದರು. ಫ್ರೆಂಚ್ ಸರಕಾರದ ಸಂಸತ್ತಿನ ಸದಸ್ಯರಾಗಿ ಹಣಕಾಸು ಮಂತ್ರಿ , ಪ್ರಧಾನ ಮಂತ್ರಿ , ವಿದೇಶಾಂಗ ವ್ಯವಹಾರಗಳ ಮಂತ್ರಿ , ನ್ಯಾಯಾಂಗ ಮಂತ್ರಿ ಎಂಬಂತಹ ಮುಖ್ಯವಾದ ಹುದ್ದೆಗಳನ್ನು ಅವರು ನಿಭಾಯಿಸಿದರು. ದೇಶಕ್ಕೆ ನೈತಿಕ ಅಂಶದ ಬಿಂದುವಾಗಿ ಮತ್ತು ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯ ಸಾಮಾನ್ಯ ವ್ಯವಸ್ಥೆಯ ರಚನೆಗೆ ದುಡಿದರು.


ಕಾನ್ರಾಡ್ ಅಡೆನ್ಯುರ್ ಮತ್ತು ಅಲ್ಸಿದೆ ದೆ ಗ್ಯಾಸ್ಪರಿ ರ ಜೊತೆಗೆ ರಾಬರ್ಟ್ ಶೂಮೆನ್‌ರವರನ್ನು ಯೂರೋಪಿನ ಐಕ್ಯತೆಯ ತಂದೆ ಎಂದು ಪರಿಗಣಿಸಲಾಗಿದೆ. ಅವರ ಕೆಲಸಕಾರ್ಯಗಳು ೨೫ ಮಾರ್ಚಿ ೧೯೫೭೬ ರ ರೋಮನ ಒಪ್ಪಂದಕ್ಕೆ ಕಾರಣವಾಗುತ್ತ ಯೂರೋಪಿನ ಆರ್ಥಿಕ ಸಮುದಾಯದ ಸ್ಥಾಪನೆಗೆ ಕಾರಣವಾಯಿತು. ೧೯೫೮ ರಲ್ಲಿ ಮೆಚ್ಚುಗೆಯಿಂದ ಹೊಸ ಯೂರೋಪ್ ಸಂಸತ್ತಿನ ಅಧ್ಯಕ್ಷರಾಗಿ ಚುನಾಯಿತರಾದರು. ನಂತರದ ವರ್ಷದಲ್ಲಿ ಅವರು ಸೆರೆಬ್ರಲ್ ಸ್ಲೀರೋಸಿಸ್ ಖಾಯಿಲೆಯ ಭಾರಿ ಹೋಡೆತಕ್ಕೆ ತುತ್ತಾಗಿ ಕೆಲಸಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಅಡಚಣೆಯಾಗುತ್ತಿದ್ದ ಕಾರಣ ಅವರನ್ನು ಯೂರೋಪ್ ಸಂಸದೀಯ ಸಭೆಯ ಗೌರವಾಧ್ಯಕ್ಷರಾಗಿ ನೇಮಕಮಾಡಲಾಯಿತು. ಅವರು ಸೈ ಚಝೆಲ್ಸ್ ನಲ್ಲಿ (ಫ್ರಾನ್ಸ್) ೪ ಸೆಪ್ಟೆಂಬರ್ ೧೯೬೩ ರಂದು ತಮ್ಮ ೭೭ ನೇ ವಯಸ್ಸಿನಲ್ಲಿ ನಿಧನರಾದರು.


ಪೋಲ್ಯಂಡ್ ದೇಶದಲ್ಲಿ ಉಂಟಾದ ಸೋವಿಯತ್ ಆಕ್ರಮಣದ ಸಂದರ್ಭದಲ್ಲಿ ಹತ್ತುಮಂದಿ ಕನ್ಯಾಸ್ತ್ರೀಯರು ಹುತಾತ್ಮರಾದರು


ದ್ವಿತಿಯ ಮಹಾಯುದ್ಧದ ಅಂತ್ಯದ ವೇಳೆ ಪೋಲ್ಯಾಂಡ್ ದೇಶದಲ್ಲಿ ಉಂಟಾದ ಸೋವಿಯತ್ ಆಕ್ರಮಣದಿಂದಾಗಿ ಹುತಾತ್ಮರಾದ ಸಂತ ಎಲಿಜಬೆತ್ ಸಭೆಗೆ ಸೇರಿದ ಹತ್ತು ಧಾಮಿಕ ಕನ್ಯಾಸ್ತ್ರೀಯರ ಹುತಾತ್ಮತೆಯನ್ನು ಪರಿಗಣಿಸುತ್ತ ಅವರನ್ನು ಪುನಿತರೆಂದು ಕರೆಯಲ್ಪಡಲಾಗುತ್ತದೆ. ಪಾಸ್ಕಲಿನ ಜಾನ್, ಮರಿಯ ಎದಿಲ್ಬುಗಿ೯ಸ್ ಕುಬಿಟ್‌ಸ್ಕಿ, ಮರಿಯ ರೋಸಾರಿಯ ಶಿಲ್ಲಿಂಗ್ , ಮರಿಯ ಅದೆಲಾ ಶ್ಕಾರ್ಮ್ , ಮರಿಯ ಸಬಿನ ತೈನೆಲ್, ಮರಿಯ ಸಪೈಂಟಿಯ ಹೈಮನ್, ಮರಿಯ ಅದೆಲ್‌ಹೈಡಿಸ್ ತೋಫರ್ , ಮರಿಯ ಮೆಲುಸಿಯ ರಿಬ್ಕಾ, ಮರಿಯ ಅಕುಟಿನ ಗೋರ್ಲ್ಡಬರ್ಗ, ಈ ೯ ಮಂದಿ ಪೋಲ್ಯಾಂಡ್ ದೇಶದ ಕನ್ಯಾಸ್ತ್ರೀಯರು ಹಾಗೂ ಮರಿಯ ಫೆಲೆಸಿತಸ್ ಎಲ್ಮೆರರ್ ಜರ್ಮನಿಯಲ್ಲಿ ಹುಟ್ಟಿದ್ದರು.


ಅವರೆಲ್ಲರೂ ರೋಗಿಗಳಿಗೆ ಹಾಗೂ ವೃದ್ಧರಿಗೆ ಸುಸೃಶೆ ಮಾಡುತ್ತಿರುವಾಗ ವಿವಿಧ ಸ್ಥಳಗಳಲ್ಲಿ ಕೆಂಪು ಸೇನೆ ಸೈನಿಕರಿಂದ ೧೯೪೫ ಫೆಬ್ರವರಿ-ಮೇ ತಿಂಗಳ ನಡುವೆ ಕ್ರೂರವಾದ ರೀತಿಯಲ್ಲಿ ಕೊಲೆಯಾದರು. ಕನ್ಯಾಸ್ತ್ರೀಯರಲ್ಲಿ ಒಬ್ಬರಾದ ಮರಿಯ ರೋಸಾರಿಯ ಶಿಲ್ಲಿಂಗ್ ಸುಮಾರು ೩೦ ಸೈನಿಕರಿಂದ ಅತ್ಯಾಚಾರಕ್ಕೊಳಗೊಂಡು ಮಾರನೆಯ ದಿನ ಕೊಲೆಯಾದರು. ಕನ್ಯಾಸ್ತ್ರೀಯರ ಮೇಲಿನ ಸೋವಿಯತ್ ಮಿಲಿಟರಿಯ ಕೋಪವು , ವಿಶ್ವಾಸದ ಬಗೆಗೆ, ನಿರ್ದಿಷ್ಠವಾಗಿ ಕಥೋಲಿಕರ ಮೇಲಿನ ಅವರ ದ್ವೇಷವನ್ನು ವ್ಯಕ್ತಪಡಿಸುತ್ತಿತ್ತು. ನಾಸ್ತಿಕ ಮತ್ತು ಮಾರ್ಕ್ಸವಾದಿ ಸಂಸ್ಕೃತಿಯೊಂದಿಗೆ ಬೋಧಿಸಲ್ಪಟ್ಟ ಅವರುಗಳು ಧಾರ್ಮಿಕ ವಸ್ತ್ರಧಾರಿಗಳಿಗೆ ಅತ್ಯಾಚಾರವನ್ನು ಅವಮಾನದ ಆಯುಧವಾಗಿ ಬಳಸಿದರು. ತನಗೆ ಬಂದೊದಗುವ ಅಪಾಯದ ಅರಿವಿದ್ದರೂ ಅವರು ತಮ್ಮ ಜನರ ಸೇವಾಕಾರ್ಯದಿಂದ ಹಿಂಜರಿಯಲು ಇಚ್ಛಿಸುತ್ತಿರಲಿಲ್ಲ. ವಿಶ್ವಾಸಿಗಳು ಅವರನ್ನು ತ್ವರಿತವಾಗಿ ರಕ್ತಸಾಕ್ಷಗಳೆಂದು ಪರಿಗಣಿಸಿದರು. ಅವರ ಸಮಾಧಿಯನ್ನು ಎಷ್ಟೋ ಯಾತ್ರಾಥಿಗಳು ಇನ್ನೂ ಸಂಧಿಸುತ್ತಾರೆ.


ಫಾದರ್ ಜೆನಿಂಗ್‌ಜೆನ್, ಶೋನೆನ್‌ಬರ್ಗನ ಮರಿಯ ಪುಣ್ಯಕ್ಷೇತ್ರದ ಆತ್ಮ, ಜೀವಾಳ


ಪುನೀತರೆಂದು ಪರಿಗಣಿಸಿದವರಲ್ಲಿ ಜರ್ಮನಿಯ ಯೇಸು ಸಭೆಯ ಗುರು ಜೋಹನ್ ಫಿಲಿಫ್ ಜೆನಿಂಗ್‌ಜೆನ್ ರವರು ೧೭ನೇ ಶತಮಾನದಲ್ಲಿ ಜೀವಿಸಿ (೧೬೪೨-೧೭೦೪) . ಡಚ್ಚರ ಉತುಮ್‌ಬರ್ಗ್ನ, ಶೋನೆನ್‌ಬರ್ಗ್ನ ಬೆಟ್ಟದ ದೇವರ ತಾಯಿಗೆ ಸಮರ್ಪಿತವಾದ ಒಂದು ಪುಟ್ಟದಾದ ಪ್ರಾರ್ಥನಾ ಮಂದಿರವನ್ನು ಪ್ರಖ್ಯಾತ ಮರಿಯ ಪುಣ್ಯಕ್ಷೇತ್ರವಾಗಿ ಮಾರ್ಪಡಿಸುವುದರಲ್ಲಿ ಯಶಸ್ವಿಯಾದರು. ಇದು ಹಲವಾರು ಯಾತ್ರಾರ್ಥಿಗಳ ತಾಣವಾಗಿದೆ.


ಹೊಸ ಪೂಜ್ಯರು ಎಂದು ಘೋಷಿಸಿದವರಲ್ಲಿ ಒಬ್ಬ ಫಾದರ್ ಹಾಗು ಮೂವರು ಕನ್ಯಾಸ್ತ್ರೀಯರು ಒಳಗೊಂಡಿದ್ದಾರೆ


ಪೂಜ್ಯರೆಂದು ಪರಿಗಣಿಸಿದವರಲ್ಲಿ ಮೂಕ-ಕಿವುಡು ಸಂರಕ್ಷಣಾ ಭಗಿನಿಯರ ಸಭೆಯನ್ನು ಸ್ಥಾಪಿಸಿದ, ಇಟಲಿಯ ಫಾದರ್ ಸೆವರಿನೋ ಫೆಬ್ರಿಯಾನಿಯವರು (೧೭೯೨-೧೮೫೭). ಕನ್ಯಾಮರಿಯಮ್ಮನವರ ನಿಶ್ಕಳಂಕ ಹೃದಯದ ಪುಟ್ಟ ಸಹೋದರಿಯರ ಸಭೆಯನ್ನು ಸ್ಥಾಪಿಸಿದ ರಶಿಯಾ ದೇಶದ ಕನ್ಯಾಸ್ತ್ರೀ ಎಂಜಲಾ ರೋಸಾ ಗೊಡೆಸ್ಕಾ (೧೮೬೧-೧೯೩೭), ಕಾರ್ಖಾನೆ ಕೆಲಸಗಾರರ ಆರೈಕೆ ಮಾಡುವ ವರ್ಚಸ್ಸಿನ ದುಃಖಿಗಳ ಮಾತೆಯ ಅಲ್ಪ ಸಹೋದರಿಯರು ಸಭೆಯ ಇಟಲಿಯ ಕನ್ಯಾಸ್ತ್ರೀ ಓರ್ಸಾಲ ದೊನಾತಿ (೧೮೪೯-೧೯೩೫) ಮತ್ತು ನಿಶ್ಕಳಂಕ ಮೇರಿಮಾತೆಯ ಸಭೆಯ ಸ್ಪೇನ್ ದೇಶದ ಕನ್ಯಾಸ್ತ್ರೀ ಮರಿಯ ಸ್ಟೆಲ್ಲಾ ದಿ ಗೆಸು (೧೮೯೯-೧೯೮೨) ಇವರುಗಳು ಇದ್ದಾರೆ.


19 ಜೂನ್ 2021, 13:48


ಕನ್ನಡಕ್ಕೆ : ರಾಬರ್ಟ್ ಕೆನಡಿ

11 views0 comments

Comments


ADDRESS

Archbishop’s House

75 Millers Road,

Bengaluru – 560 046

Karnataka

India

JOIN THE ARCHDIOCESAN 
MAILING LIST
  • Grey Facebook Icon
  • Grey Instagram Icon

QUICK LINKS : CCBI | VATICAN

© 2024 ALL RIGHTS RESERVED ARCHDIOCESE OF BANGALORE (ARCHDIOCESAN COMMUNICATION CENTER) | DESIGNED BY WISE MEDIA 

bottom of page