ಮಾರ್ಚ್ ತಿಂಗಳ ಆರಂಭದಲ್ಲಿ ಪೋಪ್ ರವರ ಐತಿಹಾಸಿಕ ಇರಾಕ್ ಭೇಟಿಯ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲು ಕ್ರೈಸ್ತ ಹಾಗೂ ಮತ್ತು ಮುಸ್ಲಿಂ ನಾಯಕರು ವೆಬಿನಾರ್ ಮೂಲಕ ಗುರುವಾರ ಒಟ್ಟುಗೂಡಿದರು.
ಕ್ರಿಸ್ಟೋಫರ್ ವೆಲ್ಸ್ ಅವರಿಂದ
’ದಿ ಹೈಯರ್ ಕಮ್ಮಿಟಿ ಫಾರ್ ಹುಮನ್ ಫ್ರಟರ್ನಿಟಿ’ ಅಂದರೆ ಮಾನವ ಸೋದರತೆಯ ಉನ್ನತ ಸಮಿತಿಯು "ಮಾನವ ಸೋದರತೆಯ ಕ್ಷಣ: ಪೋಪ್ ಫ್ರಾನ್ಸಿಸ್ ಅವರ ಐತಿಹಾಸಿಕ ಇರಾಕ್ ಭೇಟಿಯ ಪರಿಣಾಮ" ಕುರಿತು ಗುರುವಾರದ ವೆಬಿನಾರ್ ಸಭೆಗೆ ಒಟ್ಟುಗೂಡಿದರು..
ಈ ವೆಬಿನಾರ್ ಕೂಟವು ಪೋಪ್ ಫ್ರಾನ್ಸಿಸರ ಇರಾಕ್ ನ ಪ್ರೇಷಿತ ಯಾತ್ರೆಯ ಮಹತ್ವದ ಕುರಿತು ಒಳನೋಟಗಳನ್ನು ಹಂಚಿಕೊಳ್ಳಲು ಮಧ್ಯಪ್ರಾಚ್ಯ ಪ್ರದೇಶದ ಧಾರ್ಮಿಕ ಮತ್ತು ನಾಗರಿಕ ನಾಯಕರನ್ನು ಒಟ್ಟುಗೂಡಿಸಿತು. ಇವರು ಇರಾಕಿನ ಪುನರ್ನಿರ್ಮಾಣದ ಮುಂದಿನ ಹೆಜ್ಜೆಗಳು, ದೇಶದ ಸ್ಥಿರತೆ, ಸಾಮರಸ್ಯ ಮತ್ತು ಉತ್ತಮ ಭವಿಷ್ಯದ ಸಾಧ್ಯತೆಗಳ ಬಗ್ಗೆ ಚರ್ಚಿಸಿದರು.
ಮಾನವ ಸಹಬಾಳ್ವೆಗೆ ಅದ್ಭುತವಾದ ಬಿಡಿಚಿತ್ರಗಳು
ಈ ಉನ್ನತ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯಾಧೀಶ ಮೊಹಮ್ಮದ್ ಅಬ್ದೆಲ್ಸಲಾಮ್ ಅವರು ವೆಬಿನಾರ್ ಅನ್ನು ಉದ್ಘಾಟಿಸುತ್ತಾ, “ಒಂದು ಸುಂದರವಾದ ಸಾಮಾಜಿಕ ಚೌಕಟ್ಟು ಮತ್ತು ಮಾನವ ಸಹಬಾಳ್ವೆಗೆ ಅದ್ಭುತವಾದ ಬಿಡಿಚಿತ್ರದಂತಿರುವ ಪೋಪ್ ರವರ ಈ ಭೇಟಿಯನ್ನು ನಮ್ಮ ನಲ್ಮೆಯ ಇರಾಕ್ ದೇಶದ ಸಹೋದರರ ನೆರವಿಗೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಯೋಚಿಸಲು ಸೇರಿದ್ದೇವೆ.
ಈ ಸುಂದರವಾದ ಚಿತ್ರಣಕ್ಕೆ ಯುದ್ಧಗಳು, ಘರ್ಷಣೆಗಳು ಮತ್ತು ಭಯೋತ್ಪಾದನೆಯಿಂದ ಧಕ್ಕೆಯಾಗಿದ್ದೂ ಇರಾಕಿನ ದೇಹದಲ್ಲಿ ದೊಡ್ಡ ಗಾಯವನ್ನುಂಟುಮಾಡಿದೆ.
ಇರಾಕಿನ ಈ ತೊಳಲಾಟವು, ಜನರ ಕಣ್ಣೀರನ್ನು ನೋಡಿ ಒರಸದೆ ಮುಂದೆ ಹೋಗಲಾಗದಂತೆ ಪೂಜ್ಯ ತಂದೆಯನ್ನು ಪ್ರೇರೇಪಿಸಿತು" ಎಂದರು.
ಅವರು ಪೂಜ್ಯ ತಂದೆ ಪೋಪ್ ರವರ ಈ ಐತಿಹಾಸಿಕ ಭೇಟಿಯ ಸದುಪಯೋಗವನ್ನು ಪಡೆಯುವತ್ತ ಈ ಉನ್ನತ ಸಮಿತಿಯು ತನ್ನ ಅತ್ತ್ಯುತ್ತಮ ಪ್ರಯತ್ನವನ್ನು ಮಾಡುತ್ತದೆ ಎಂಬ ಭರವಸೆಯನ್ನು ನೆರೆದ ಸದಸ್ಯರಿಗೆ ನೀಡಿದರು. ಅಂತೆಯೇ ಗ್ರ್ಯಾಂಡ್ ಇಮಾಮ್ ನ ಅಲ್-ಅಜರ್ ವರು ಸಹ ಇರಾಕಿಗೆ ಭೇಟಿ ನೀಡಿ “ಮಾನವ ಸೋದರತೆಯ ಈ ಬಿಡಿ ಚಿತ್ರವನ್ನು’ ಸಂಪೂರ್ಣಗೊಳಿಸಲಿ ಎಂದು ಆಶಿಸಿದರು.
ನಾವೆಲ್ಲರೂ ಸಹೋದರರು
ವೆಬಿನಾರ್ ನ ಪ್ರಮುಖ ಭಾಷಣಕಾರರಲ್ಲಿ ಬ್ಯಾಬಿಲೋನ್‌ನ ಮುತ್ಸದಿ ಮತ್ತು ಚಾಲ್ಡಿಯನ್ ಕ್ಯಾಥೊಲಿಕ್ ಧರ್ಮಸಭೆಯ ಮುಖ್ಯಸ್ಥ ಕಾರ್ಡಿನಲ್ ಲೂಯಿಸ್ ರಾಫೆಲ್ ಐ ಸಾಕೊ ಕೂಡ ಒಬ್ಬರಾಗಿದ್ದರು. ಅವರು "ಪೋಪ್ ತಮ್ಮ ಭಾಷಣಗಳು ಮತ್ತು ಸಭೆಗಳಲ್ಲಿ ಪ್ರಸ್ತಾಪಿಸಿದವುಗಳನ್ನು ಕಾರ್ಯಗತಗೊಳಿಸುವಲ್ಲಿನ ದೃಷ್ಟಿಕೋನ ಮತ್ತು ಕಾರ್ಯ ಯೋಜನೆಯತ್ತ ಸದಸ್ಯರು ಸಾಗುತ್ತಾರೆ" ಎಂಬ ಭರವಸೆ ವ್ಯಕ್ತಪಡಿಸಿದರು.
“ಈ ರೀತಿಯ ಘರ್ಷಣೆ, ಉಗ್ರವಾದ ಮತ್ತು ಕರೋನವೈರಸ್ ಸಾಂಕ್ರಾಮಿಕದ ಮಧ್ಯೆಯೂ ಇರಾಕ್ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್ ತಮ್ಮೊಂದಿಗೆ ’ಒಂದು ಪ್ರಭಾವಶಾಲಿ ಸಂದೇಶ’ ವನ್ನು ಹೊತ್ತು ತಂದರು” ಎಂದು ಕಾರ್ಡಿನಲ್ ಸಾಕೊ ವಿವರಿಸಿದರು: “ನಮ್ಮ ಭಿನ್ನ ನಿಲುವುಗಳ ನಡುವೆಯೂ ನಾವೆಲ್ಲರೂ ಸಹೋದರರು, ನಮ್ಮ ವೈವಿಧ್ಯತೆಯನ್ನು ಗೌರವಿಸುತ್ತಲೇ ಉತ್ತಮ ಸಮಾಜವನ್ನು ನಿರ್ಮಿಸಲು ಕೈ ಜೋಡಿಸಬೇಕು" ಎಂದರು.
"ಪ್ರತಿಯೊಬ್ಬ ಮನುಷ್ಯನೂ ಶಾಂತಿ, ಸ್ಥಿರತೆ, ಸ್ವಾತಂತ್ರ್ಯ ಮತ್ತು ಘನತೆಯನ್ನು ಪಡೆಯುವ ಹಾದಿಯಲ್ಲಿ ಅನುಸರಿಸಬೇಕಾದ ಏಕೈಕ ಮಾರ್ಗವೆಂದರೆ ಶಸ್ತ್ರಾಸ್ತ್ರಗಳ ನಿಗ್ರಹ ಎಂಬುದರ ಮೇಲೆ ಪೋಪ್ ಗಮನ ಹರಿಸಿದ್ದಾರೆ” ಎಂದು ಹಿರಿಯರು ತಿಳಿಸಿದರು.
ಅಂತರ್ ಧಾರ್ಮಿಕ ವಿಚಾರ ವಿನಿಮಯದಲ್ಲಿ ಒಂದು ಮೈಲಿಗಲ್ಲು
ಪೋಂಟಿಫಿಕಲ್ ಕೌನ್ಸಿಲ್ ಫಾರ್ ಇಂಟೆರೆಲಿಜಿಯಸ್ ಡೈಲಾಗ್‌ನ ಅಧ್ಯಕ್ಷರಾದ ಕಾರ್ಡಿನಲ್ ಮಿಗುಯೆಲ್ ಏಂಜೆಲ್ ಆಯುಸೊ ಗುಯಿಕ್ಸಾಟ್ ರವರು ಮಾತನಾಡುತ್ತಾ, “ಇರಾಕ್‌ನ ಇಡೀ ಪ್ರವಾಸವು ಮಹತ್ವದ್ದಾಗಿತ್ತು. ಪ್ರವಾಸದ ಪ್ರತಿ ಕ್ಷಣದ ಮೇಲೆಯೂ ಪ್ರತೀಕ ಹಾಗೂ ಪದಗಳ ಗುರುತು ಮೂಡಿಸಲಾಯಿತು. 2019 ರಲ್ಲಿ ಅಬುಧಾಬಿಯಲ್ಲಿ ಮಾನವ ಸೋದರತೆ ಕುರಿತ ದಾಖಲೆಗೆ ಸಹಿ ಹಾಕಿದ ನಂತರ, ಈ ಇರಾಕ್ ಭೇಟಿ ಅಂತರ್ ಧಾರ್ಮಿಕ ವಿಚಾರ ವಿನಿಮಯದಲ್ಲಿ ಒಂದು ಮೈಲಿಗಲ್ಲು ಆಗಿದೆ” ಎಂದರು.
ರಾಫೆಲ್ ಐ ಸಾಕೊರ ಮಾತುಗಳನ್ನು ಪ್ರತಿಧ್ವನಿಸುತ್ತಾ, ಕಾರ್ಡಿನಲ್ ಆಯುಸೊ “ಪೋಪ್ ಫ್ರಾನ್ಸಿಸ್, ಇರಾಕಿಗಳಿಗೆ ’ನೀವೆಲ್ಲರೂ ಸಹೋದರರು’ ಎಂದು ಹೇಳಲು ಒಬ್ಬ ಗುರುವಾಗಿ ಇರಾಕಿಗೆ ಹೋದರು” ಎಂದು ಹೇಳಿದರು. ಇದು ಕೇವಲ “ಸೈದ್ಧಾಂತಿಕ ಸಹೋದರತ್ವವಲ್ಲ, ಬದಲಿಗೆ ದೇವರ ಕನಸು ನನಸಾಗಲು ಪ್ರತಿಯೊಬ್ಬರೂ ಬದ್ಧರಾಗಲು ಕರೆಯಾಗಿದೆ. ಒಂದೇ ಆಕಾಶವನ್ನು ನೋಡುವ, ಒಂದೇ ಭೂಮಿಯ ಮೇಲೆ ಶಾಂತಿಯಿಂದ ನಡೆಯುವ ಎಲ್ಲಾ ಮಕ್ಕಳನ್ನು ಸ್ವಾಗತಿಸಲು ಈ ಮಾನವ ಪರಿವಾರವು ಆತಿಥ್ಯವಹಿಸುವ ಕರೆಯೂ ಆಗಿದೆ” ಎಂದರು.
ಗ್ರ್ಯಾಂಡ್ ಅಯತೊಲ್ಲಾ ಸಯ್ಯಿದ್ ಅಲಿ ಅಲ್-ಹುಸೇನಿ ಅಲ್-ಸಿಸ್ತಾನಿಗೆ ಪೋಪ್ ರವರು ನೀಡಿದ ಸೌಜನ್ಯಪೂರ್ವಕ ಭೇಟಿಯು ಕ್ರೈಸ್ತರು ಹಾಗೂ ಮುಸ್ಲಿಮರ ನಡುವಿನ ಸೋದರತೆಯ ಬೆಳವಣಿಗೆಯಲ್ಲಿ ನಿಜಕ್ಕೂ ಮಹತ್ವದ ಕೊಡುಗೆಯಾಗಿದೆ ಎಂದು ಕಾರ್ಡಿನಲ್ ಅಯುಸೋ ಒತ್ತಿ ಹೇಳಿದರು.
ಅಂತೆಯೇ “ಮೂರು ಏಕದೈವವಾದದ ಶ್ರೇಷ್ಠ ಧರ್ಮಗಳ ಪಿತಾಮಹನಾದ ಅಬ್ರಹಾಮನ ನೆಲೆಯಾದ ಉರ್ ಬಯಲಿನಲ್ಲಿ ನಡೆದ ಪ್ರಾರ್ಥನಾ ಸಭೆಯು ಇತರ ಧಾರ್ಮಿಕ ಸಂಪ್ರದಾಯದ ಭಕ್ತರೊಂದಿಗೆ ಒಟ್ಟಾಗಿ ಪ್ರಾರ್ಥನೆ ಸಲ್ಲಿಸಲು ಒಂದು ಅವಕಾಶವಾಗಿ, ಸಹೋದರರ ನಡುವಿನ ಸಹಬಾಳ್ವೆಯ ಕಾರಣದ ಮರು ಹುಡುಕಾಟಕ್ಕೆ , ವಿವಿಧ ಬಣ ಮತ್ತು ಜನಾಂಗಗಳನ್ನು ಮೀರಿದ ಸಾಮಾಜಿಕ ಚೌಕಟ್ಟನ್ನು ಪುನರ್ನಿಮಾಣಕ್ಕೆ ಮತ್ತು ಮಧ್ಯಪ್ರಾಚ್ಯವೂ ಸೇರಿದಂತೆ ಇಡೀ ಜಗತ್ತಿಗೆ ಸಂದೇಶವನ್ನು ರವಾನಿಸುವ ಅವಕಾಶ ನೀಡಿತು.
’ದೇವರನ್ನು ಆರಾಧಿಸುವ ಮತ್ತು ನೆರೆಯವರನ್ನು ಪ್ರೀತಿಸುವುದೇ ನೈಜ ಧಾರ್ಮಿಕತೆ ಎಂದು ಉರ್ ನಲ್ಲಿ ಪೋಪ್ ವಿವರಿಸಿದರು’” ಎಂದರು
ಇರಾಕ್ ದೇಶದ ಪುನರ್ನಿರ್ಮಾಣ
ಗುರುವಾರದ ಈ ವೆಬಿನಾರ್ ನಲ್ಲಿ ಯುನೆಸ್ಕೋದ ಸಹಾಯಕ ಮಹಾನಿರ್ದೇಶಕ ಅರ್ನೆಸ್ಟೊ ಒಟ್ಟೊನ್ ರಾಮಿರೆಜ್ ಕೂಡ ಸೇರಿದ್ದಾರೆ, ಅವರು ಡೊಮಿನಿಕನ್ ಫಾದರ್ ಆಲಿವಿಯರ್ ಪೊಕ್ವಿಲನ್ ರವರೊಂದಿಗೆ ಯುನೆಸ್ಕೋದ “ರಿವೈವ್ ದಿ ಸ್ಪಿರಿಟ್ ಆಫ್ ಮೊಸುಲ್” ಕಾರ್ಯದ ಬಗ್ಗೆ ಬೆಳಕು ಚೆಲ್ಲಿದರು.
ಇರಾಕ್ ಮತ್ತು ಯುಎಇನ ಸಂಸ್ಕೃತಿ ಇಲಾಖೆಯ ಮಂತ್ರಿಗಳು “ಈ ಪ್ರದೇಶದ ಜನರು ಎದುರಿಸುತ್ತಿರುವ ಸಾಮಾನ್ಯ ಸವಾಲುಗಳ ಬಗ್ಗೆ ಗಮನ ಸೆಳೆದರು. ಇರಾಕಿನ ಇಸ್ಲಾಮಿಕ್ ಸಮುದಾಯದ ಪ್ರತಿನಿಧಿ ಹಾಗೂ ಇರಾಕಿನ ಅಂತರ್ ರ್ಧಾಮಿಕ ವಿಚಾರ ವಿನಿಮಯ ಸಭೆಯ ಸಹ-ಸಂಸ್ಥಾಪಕ ಡಾ. ಸಯ್ಯದ್ ಜವಾದ್ ಅಲ್-ಖೋಯಿ; ಮತ್ತು ಬಾಗ್ದಾದ್ ನ ಅಬು ಹನೀಫಾ ಮಸೀದಿಯ ಇಮಾಮರಾದ ಶೀಚ್ ಅಬ್ದೆಲ್-ವಹಾಬ್ ತಾಹಾ ಅಲ್-ಸಮ್ಮರೈ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು.
Comments