ಹಿರಿಯರ ಅಜ್ಜ,ಅಜ್ಜಿಯರ ಪ್ರಥಮ ವಿಶ್ವದಿನಾಚರಣೆಯ ಅಂಗವಾಗಿ ವಿಶ್ವಗುರು ಪ್ರಾನ್ಸಿಸ್ ರವರು ನೀಡಿದ ಸಂದೇಶವನ್ನು ಸ್ವಾಗತಿಸುತ್ತ ವಿವಾಹ ಮತ್ತು ಕುಟುಂಬ ಸಮಿತಿಯ ಐರಿಶ್ ಧರ್ಮಾಧ್ಯಕ್ಷ ಡೆನಿಸ್ ನಲ್ಟಿಯವರು, ಧರ್ಮಕೇಂದ್ರಗಳು ಈ ಸಂದರ್ಭವನ್ನು ಆಚರಿಸಲು ಉತ್ಸುಕವಾಗಿವೆ ಎಂದರು.
ವ್ಯಾಟಿಕನ್ ಸಿಬ್ಬಂದಿ ವಾರ್ತಾ ವರದಿಗಾರರಿಂದ
“ಸವಾಲುಗಳನ್ನು ಎದುರಿಸುವಾಗ ಅವರ ಸಾಮಾಜಿಕವಾದ, ಸಮಚಿತ್ತವಾದ ವಾಸ್ತವಿಕತೆಯನ್ನು ಬಹಳಷ್ಟು ನಾವು ಕಲಿತಿದ್ದೇವೆ”
ಕೊಂಡಾಡದ ನಾಯಕರು
“ಹಿರಿಯರು ಅಜ್ಜ ಅಜ್ಜಿಯರು ಹಾಗು ಹಿರಿಯ ಯಾಜಕರು, ಧಾರ್ಮಿಕರು ಸಾಂಕ್ರಾಮಿಕರೋಗವನ್ನು ಕೊಂಡಾಡÀದ ನಾಯಕರು” ಎಂಬುದು ವಿವಾಹ ಮತ್ತು ಕುಟುಂಬ ಸಮಿತಿಯ ಅಧ್ಯಕ್ಷ, ಧರ್ಮಾಧ್ಯಕ್ಷ ಡೆ ಡೆನಿಸ್ ನಲ್ಟಿ ಅವರ ಅಭಿಪ್ರಾಯದ ಮಾತುಗಳು. ಅಜ್ಜ ಅಜ್ಜಿಯರಿಗೆ ಮತ್ತು ಹಿರಿಯರಿಗೆ “ಲೋಕಾಂತ್ಯದವರೆಗೂ ಸದಾ ನಿಮ್ಮೊಡನೆ ಇರುತ್ತೇವೆ” (ಮತ್ತಾಯ ೨೮:೨೦) ಎಂಬ ವಿಷಯ ಕುರಿತು ಜುಲೈ ೨೫ ರಂದು ವಿಶ್ವದಿನವನ್ನು ಆಚರಿಸಲಾಗುವುದು. ಈ ವಿಶ್ವದಿನವನ್ನು ಗುರುತಿಸುವ ವಿಶ್ವಗುರು ಫ್ರಾನ್ಸಿಸ್ ರವರ ಸಂದೇಶವನ್ನು ಸ್ವಾಗತಿಸಿದ ಧರ್ಮಾಧ್ಯಕ್ಷ ಡೆನಿಸ್ ನಲ್ಟಿ ಅವರು ಈ ಸಾಂಕ್ರಾಮಿಕ ಸಮಯದಲ್ಲಿ ಇಡೀ ಧರ್ಮಸಭೆಯ ಎಲ್ಲ ಹಿರಿಯರು, ಅಜ್ಜ ಅಜ್ಜಿಯರು ಹತ್ತಿರದಲ್ಲಿರುವ ಅವಶ್ಯಕತೆಯನ್ನು ನೆನಪಿಸುತ್ತದೆ ಎಂದರು.
ನಿಯೋಗದಿಂದ ಪ್ರೋತ್ಸಾಹ
ಧರ್ಮಾಧ್ಯಕ್ಷರು ತಮ್ಮ ಭವಿಷ್ಯವಾಣಿಯುದ್ದಕ್ಕೂ ವಿಶ್ವಗುರು ಫ್ರಾನ್ಸಿಸ್ ರವರು ಜನರು ತಮ್ಮ ಅನೇಕ ಕೊಡುಗೆಗಳನ್ನು ಗೌರವಿಸುವಂತೆ ಒತ್ತಿ ಹೇಳಿದರೆಂದು ಗಮನಸೆಳೆದಿದ್ದಾರೆ.
ಈ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಿದ ಅವರ ವಿಷಯದಲ್ಲಿ “ವಿಶ್ವಗುರುಗಳು ತಲೆಮಾರುಗಳಿಂದ ಪರಸ್ಪರ ಹಂಚಿಕೊಳ್ಳುವ ನಿಕಟತೆಯ ಭರವಸೆಯನ್ನು ಎತ್ತಿ ತೋರಿಸುತ್ತದೆ” ಎಂದಿದ್ದಾರೆ, ಧರ್ಮಾಧ್ಯಕ್ಷ ನಲ್ಟಿಯವರು.
“ನಮ್ಮ ಯುವಜನರನ್ನು ವಯಸ್ಸಾದವರ ಜೀವನದಲ್ಲಿ ಹಾಜರಾಗಲು ಕರೆಯಲಾಗುತ್ತದೆ ಮಾತ್ರವಲ್ಲ, ಆದರೆ ಮಹಾ ಪೋಷಕರು ಮತ್ತು ಹಿರಿಯರು ತಮ್ಮ ನಂಬಿಕೆಯ ಪ್ರಯಾಣದಲ್ಲಿ ಯುವಜನರನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿದ್ದಾರೆ” ಎಂದಿದ್ದಾರೆ.
ಸದಾ ಅವರು ನಮ್ಮೊಂದಿಗಿದ್ದಾರೆ
ಮಂಗಳವಾರ ಹೊರಡಿಸಿದ ವಿಶ್ವಗುರುಗಳ ಸಂದೇಶದ ಪಠ್ಯವನ್ನು ಉಲ್ಲೇಖಿಸಿ, ಖಿಲ್ಡೇರ್ ಮತ್ತು ಲೆಗ್ಲಿನ್ ಧರ್ಮಾಧ್ಯಕ್ಷರುಗಳು, ವಿಶ್ವಗುರು ಫ್ರಾನ್ಸಿಸ್‌ವರು ‘ಇತ್ತೀಚಿನ ತಿಂಗಳುಗಳಲ್ಲಿ ಪ್ರತ್ಯೇಕವಾಗಿ ಮತ್ತು ಏಕಾಂಗಿಯಾಗಿರುವವರೆಲ್ಲರಿಗೂ ಜೊತೆಗಾರರಾಗಿದ್ದಾರೆ, ಕರಾಳ ಕವಿದ ಸಂದರ್ಭದಲ್ಲೂ ನಮ್ಮ ಏಕಾಂತತೆಯನ್ನು ನಿವಾರಿಸಲು ದೇವರು ತಮ್ಮ ದೂತರನ್ನು ಕಳುಹಿಸಿ ‘ಅವರು ಸದಾ ನಮ್ಮೊಂದಿಗಿದ್ದಾರೆ” ಎಂದು ನೆನಪು ಮಾಡಿದ್ದಾರೆ.
‘ನಿಮ್ಮನ್ನು ಸಂತೈಸಲು ದೇವರು ತಮ್ಮ ದೂತರನ್ನು ಕಳುಹಿಸಿದರು’ - ಹಿರಿಯರಿಗೆ ವಿಶ್ವಗುರು ಫ್ರಾನ್ಸಿಸ್‌ರವರ ಕಿವಿ ಮಾತು.
ನಮ್ಮನ್ನು ಸಂತೈಸಲು ದೇವದೂತರು
“ನಮ್ಮನ್ನು ಸಂತೈಸಲು ಕಳುಹಿಸಲ್ಪಡುವ ದೇವದೂತರು ಕೆಲವೊಮ್ಮೆ ನಮ್ಮ ಮೊಮ್ಮಕ್ಕಳ ರೂಪದಲ್ಲಿ, ಇತರೆ ಸಮಯದಲ್ಲಿ ಕುಟುಂಬ ಸದಸ್ಯರ ರೂಪದಲ್ಲಿದ್ದು, ನಮ್ಮ ಜೀವಾವದಿಯ ಸ್ನೇಹಿತರು ಅಥವಾ ಪರಿಚಯಸ್ಥರ ಮುಖಗಳು, ಪ್ರೀತಿಯ ಅಪ್ಪುಗೆ ಮತ್ತು ಭೇಟಿಗಳು ಎಷ್ಟು ಮುಖ್ಯವೆಂದು ತಿಳಿದುಕೊಂಡಾಗ” ಎಂಬ ವಿಶ್ವಗುರುಗ¼ ಹೇಳಿಕೆಯನ್ನು ಧರ್ಮಾಧ್ಯಕ್ಷರು ವಿವರಿಸಿದರು.
ಧರ್ಮಕೇಂದ್ರಗಳಿಗೆ ಪ್ರೋತ್ಸಾಹ
“ವಿಶ್ವಗುರು ಫ್ರಾನ್ಸಿಸ್ ಅವರ ಪ್ರೇಷಿತತ್ವ ಪ್ರಬೋಧನೆಯ ಐದನೇ ವಾರ್ಷಿಕೋತ್ಸವದ ನೆನಪಿಗಾಗಿ ಈ ವರ್ಷ ಪ್ರಥಮವಾಗಿ ಅಜ್ಜಿ ಅಜ್ಜಿಯರ, ಹಿರಿಯರ ವಿಶ್ವದಿನವನ್ನು ಆಚರಿಸಲಾಗುವುದು” ಎಂದು ಹೇಳಿದ ಧರ್ಮಾದ್ಯಕ್ಷ ನಲ್ಟಿಯವರು ತಮ್ಮ ಸಂದೇಶವನ್ನು ಅಲ್ಲಿಗೆ ಮುಕ್ತಾಯಗೊಳಿಸಿದರು. (ಅಮೋರಿಸ್ ಲತೀಶಿಯ)
ಕುಟುಂಬಗಳಿಗೆ ಮತ್ತು ಸಮುದಾಯಗಳಿಗೆ ಸಮರ್ಪಿತ ಸೇವೆ ಸಲ್ಲಿಸಿದ ಮತ್ತು ಜೀವನ ನೀಡಿದ ವೃದ್ಧ ಯಾಜಕರನ್ನು ಮತ್ತು ಧಾರ್ಮಿಕರನ್ನು ಮರೆಯದೆ, ಅಜ್ಜ ಅಜ್ಜಿಯರ ದಿನವನ್ನು ದೇಶದಾದ್ಯಂತ ಇರುವ ಎಲ್ಲಾ ಧರ್ಮಕೇಂದ್ರಗಳಲ್ಲಿ ಆಚರಿಸಬೇಕೆಂದು ಧರ್ಮಾಧ್ಯಕ್ಷರು ಕರೆ ನೀಡಿದ್ದಾರೆ.
ಧರ್ಮಾಧ್ಯಕ್ಷರು, ಈ ವಾರ್ಷಿಕಾಚರಣೆಯಲ್ಲಿ ಸ್ಥಳಿಯರ ಶುಶ್ರೂಷಾ ಕೇಂದ್ರವನ್ನು ಸೇರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಧರ್ಮಕೇಂದ್ರಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.
ಕನ್ನಡಕ್ಕೆ: ಎಲ್. ಚಿನ್ನಪ್ಪ
23 ಜೂನ್ 2021, 14:27
Comments